ಬೆಂಗಳೂರಲ್ಲಿ ಹುಚ್ಚುನಾಯಿ ಹಾವಳಿಗೆ ಬಾಲಕರು ಸೇರಿ 7 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಬೆಂಗಳೂರಿನ ಯಲಹಂಕದ ಕೊಂಡಪ್ಪ ಲೇಔಟ್ ಬಳಿ ರಸ್ತೆಯಲ್ಲಿ ಹೋಗುವವರ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿ ಕಚ್ಚುತ್ತಿದ್ದು, ಜನರನ್ನು ಭಯಗೊಳಿಸಿದೆ. ಹುಚ್ಚುನಾಯಿಗಳ ಹಾವಳಿ ಜನರ ನಿದ್ದೆಗೆಡಿಸಿದೆ. ಹುಚ್ಚುನಾಯಿಗಳ ದಾಳಿಗೆ ಬಾಲಕರು ಸೇರಿ 7 ಮಂದಿ ಗಾಯಗೊಂಡಿದ್ದಾರೆ.

ಸಂಜೆ ವಾಕಿಂಗ್ ಹೋಗುವವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದು, ಸಿಕ್ಕ ಸಿಕ್ಕ ಕಡೆ ದಾಳಿ ನಡೆಸುತ್ತಿರುವ ಹುಚ್ಚು ನಾಯಿಯನ್ನು ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ. ಹುಚ್ಚು ನಾಯಿಗಳು ಹೆಚ್ಚಾಗಿ ಮಕ್ಕಳನ್ನೇ ಕಚ್ಚುತ್ತಿದ್ದು, ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಹುಚ್ಚುನಾಯಿ ಕಚ್ಚಿ ಏಳು ಜನರು ಗಾಯಗೊಂಡಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿ ಬಾಲಕಿ ಹಾಗೂ ಬಾಲಕಿಗೆ ಗಂಭೀರ ಗಾಯಗಳಾಗಿದೆ.