ಬಂಟ್ವಾಳ: ಸಾಮಾಜಿಕ ಕಾಳಜಿ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಅಗತ್ಯವಿದೆ. ಕ್ರೀಡೋತ್ಸವ ಸಮಾಜವನ್ನು ಮತ್ತಷ್ಟು ಒಗ್ಗೂಡಿಸುತ್ತದೆ ಎಂದು ಮಂಗಳೂರು ವಿಶೇಷ ಆರ್ಥಿಕ ವಲಯ ಪ್ರಬಂಧಕ ಯೋಗೀಶ ಕಲಸಡ್ಕ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಇದರ 32ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ಮಡಿವಾಳ ಯುವ ಬಳಗ ಪ್ರಾಯೋಜಕತ್ವದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಸರಕಾರಿ ಪ್ರಧಾನ ವಕೀಲ ನವೀನ್ ಕುಮಾರ್ ಎಂ.ಜಿ. ಮಾತನಾಡಿ, ಶುಭಹಾರೈಸಿದರು.
ಸಂಘದ ಅಧ್ಯಕ್ಷ ಎನ್.ಕೆ. ಶಿವ ಅಧ್ಯಕ್ಷತೆ ವಹಿಸಿದರು.
ಸಂಘದ ಉಪಾಧ್ಯಕ್ಷ ಪುಷ್ಪರಾಜ ಕುಕ್ಕಾಜೆ, ಕಾರ್ಯದರ್ಶಿ ಹರೀಶ್ ಮಂಕುಡೆ, ಮಹಿಳಾ ಬಳಗದ ಅಧ್ಯಕ್ಷೆ ವಿನೋದಾ ರವಿರಾಜ್ ಉಪಸ್ಥಿತರಿದ್ದರು.
ಕು. ರಕ್ಷಾ ಪ್ರಾರ್ಥಿಸಿದರು. ಯುವ ಬಳಗದ ಅಧ್ಯಕ್ಷ ಸಂದೇಶ್ ಕೊಯಿಲ ಸ್ವಾಗತಿಸಿದರು. ಕಾರ್ಯದರ್ಶಿ ವಕ್ಷೀತ್ ಇನೋಳಿ ವಂದಿಸಿದರು. ವೆಂಕಟೇಶ್ ಅನಂತಾಡಿ ನಿರೂಪಿಸಿದರು.