ಸೂರೆಬೆಟ್ಟು ವೆಂಕಟರಮಣ ಸಾಮಂತ್ ನಿಧನ

ಚೇರ್ಕಾಡಿ: ಗ್ರಾಮದ ಸೂರೆಬೆಟ್ಟು ನಿವೃತ್ತ ಶಿಕ್ಷಕ ವೆಂಕಟರಮಣ ಸಾಮಂತ್ (95) ವರ್ಷ. ನ.18 ರಂದು ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಬ್ರಹ್ಮಾವರ ಕಾಸ್ಮೋಪಾಲಿಟನ್ ಶಾಲೆಯಲ್ಲಿ 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ಚೇರ್ಕಾಡಿ ಆರ್.ಕೆ ಪಾಟ್ಕರ್ ಶಾಲೆಯ ಆಡಳಿತ ಮಂಡಳಿ ಸದಸ್ಯರಾಗಿ, ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿಯಾಗಿ, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಳದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪರೋಪಕಾರಿಯಾಗಿ ಊರಿನಲ್ಲಿ ಜನಪ್ರಿಯರಾಗಿದ್ದ ಸಾಮಂತ್ ಅವರು ಪತ್ನಿ ನಿವೃತ್ತ ಶಿಕ್ಷಕಿ ಕಮಲಾ ಟೀಚರ್, 3 ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.