ರಾಜ್ಯ ಮಟ್ಟದ 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಪ್ರಚಾರ ರಥಕ್ಕೆ ಚಾಲನೆ

ಉಡುಪಿ: ರಾಜ್ಯ ಮಟ್ಟದ 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ನವೆಂಬರ್ 14 ರಿಂದ 21 ರವರೆಗೆ ನಡೆಯಲಿದ್ದು, ಸಹಕಾರಿ ಸಪ್ತಾಹದ ಅಂಗವಾಗಿ ಮಂಗಳವಾರ ಉಡುಪಿ ಲಿಕೋ ಬ್ಯಾಂಕ್ ಆವರಣದಲ್ಲಿ ಸಹಕಾರ ಪ್ರಚಾರ ರಥಕ್ಕೆ ಸಹಕಾರಿ ಯೂನಿಯನ್‌ ನಿರ್ದೇಶಕ ಹಾಗೂ ಉಡುಪಿ ಶಾಸಕ ಯಶಪಾಲ್‌‌ ಸುವರ್ಣ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಇವರು ಸಹಕಾರಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಎಲ್ ಐ ಸಿ ಎಂಪ್ಲಾಯಿಸ್ ಕೋ – ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ. ಕೃಷ್ಣ , ಟೀಚರ್ಸ್ ಕೋ -ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ , ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಕುಂದಾಪುರ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ಅಶೋಕ್ ಕುಮಾರ್ ಬಲ್ಲಾಳ್, ವಿಶ್ವನಾಥ ಶೆಟ್ಟಿ, ದಯಾನಂದ, ಅಲೆವೂರು ಹರೀಶ್ ಕಿಣಿ, ಚಂದ್ರಹಾಸ್ ಶೆಟ್ಟಿ, ಶಂಕರ ಪೂಜಾರಿ, ಶಶಿಕಲಾ, ಮಂಜುನಾಥ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.