ಬಾಲಶಕ್ತಿ, ಬಾಲ ಕಲ್ಯಾಣ ಪುರಸ್ಕಾರ – ಪ್ರಸ್ತಾವನೆಗಳ ಆಹ್ವಾನ

ಉಡುಪಿ: 2019-20 ನೇ ಸಾಲಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡಲಾಗುವ ಬಾಲ ಶಕ್ತಿ ಪುರಸ್ಕಾರ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುವ ಬಾಲ ಕಲ್ಯಾಣ ಪುರಸ್ಕಾರ ಪ್ರಶಸ್ತಿಗಳನ್ನು ನೀಡಲು ಭಾರತ ಸರ್ಕಾರವು ಮಾರ್ಗಸೂಚಿಗಳನ್ವಯ ಸೂಕ್ತ ಪ್ರಸ್ತಾವನೆಗಳನ್ನು ಅರ್ಹ ಮಕ್ಕಳ/ ವ್ಯಕ್ತಿ/ ಸಂಸ್ಥೆಗಳಿಂದ ಮುಕ್ತ ನಾಮಪತ್ರಗಳನ್ನು ಆಗಸ್ಟ್ 31 ರ ಒಳಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.