ಶ್ರೀಹರಿಕೋಟ: ತಾಂತ್ರಿಕ ಕಾರಣಗಳಿಂದ ಚಂದ್ರಯಾನ-2 ಉಡಾವಣೆ ತಾತ್ಕಾಲಿಕ ರದ್ದು ಮಾಡಲಾಗಿದೆ. ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಇಸ್ರೋ ಈ ನಿರ್ಧಾರ ಪ್ರಕಟಿಸಿದ್ದು ಸದ್ಯದಲ್ಲೇ ಉಡಾವಣೆಯ ಮುಂದಿನ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.
ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್ ಎಲ್ ವಿ ಮಾಕ್-3 ಬಾಹುಬಲಿ ಉಢಾವಣಾ ವಾಹನದಲ್ಲಿ ಗಗನನೌಕೆ ಸಾಗಬೇಕಾಗಿತ್ತು. ಚಂದ್ರನೆಡೆಗೆ ವಿಶೇಷತೆ ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ. ಚಲನೆಗೆ ನೆರವಾಗಲು ವಿಶೇಷ ಮೋಷನ್ ಪ್ಲ್ಯಾನಿಂಗ್ ಹಾಗೂ ಮ್ಯಾಪಿಂಗ್ ನ ತಂತ್ರಾಂಶ ಇದಾಗಿದೆ. ಭಾರತದ ಅತಿ ಭಾರದ ರಾಕೆಟ್ ಬಾಹುಬಲಿ ಎಂದು ಹೆಸರಿಸಲಾದ ಜಿಎಸ್ಎಲ್ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ.
ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ. ಚಂದ್ರಯಾನ-2, ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ. ಯೋಜನಾ ವೆಚ್ಚ: 978 ಕೋಟಿ ರೂ. ಜಿಎಸ್ ಎಲ್ ವಿ: ಬಾಹುಬಲಿ ಲ್ಯಾಂಡರ್: ವಿಕ್ರಮರೋವರ್: ಪ್ರಜ್ಞಾನ್ಉಡಾವಣೆ ಸಮಯ: ಜು.15 ಬೆಳಗಿನ ಜಾವ 2 ಗಂಟೆ 51 ನಿಮಿಷಕ್ಕೆ ನೌಕೆ ತೆರಳಬೇಕಿತ್ತು.