ಉಡುಪಿ: ಪ್ರೈಮ್ ಸಂಸ್ಥೆಯು 2019-20ನೇ ಸಾಲಿನ ಐಎಎಸ್/ಕೆಎಎಸ್ ಪರೀಕ್ಷೆಗೆ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗಾಗಿ ಬ್ರಹ್ಮಗಿರಿ ಪ್ರೈಮ್ ಕೇಂದ್ರದಲ್ಲಿ ಜು. 21ರಂದು ಪ್ರವೇಶ ಪರೀಕ್ಷೆ ಹಮ್ಮಿಕೊಂಡಿದೆ.
ಬೆಳಗ್ಗೆ 10ರಿಂದ 12ರ ವರೆಗೆ ನಡೆಯಲಿರುವ 2 ಗಂಟೆ ಅವಧಿಯ 200 ಅಂಕಗಳ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಪರೀಕ್ಷೆ ನಡೆಯಲಿದೆ.
ಐಎಎಸ್ ಪ್ರಿಲಿಮಿನರಿ ಪರೀಕ್ಷೆಯ ಮುಖ್ಯ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಪ್ರಚಲಿತ ವಿದ್ಯಮಾನ, ಗಣಿತ, ವಿಜ್ಞಾನ, ರೀಸನಿಂಗ್, ಇಂಗ್ಲಿಷ್ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಯಲಿದೆ. ಪದವೀಧರರು, ಇದೀಗ ತಾನೇ ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಈ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಜು. 28ರಿಂದ ಆರಂಭಗೊಳ್ಳಲಿರುವ ಈ ತರಬೇತಿ ಪ್ರತೀ ಶನಿವಾರ ಮಧ್ಯಾಹ್ನ 2.30ರಿಂದ 5.30ರ ವರೆಗೆ, ಪ್ರತೀ ರವಿವಾರ ಬೆಳಗ್ಗೆ 9ರಿಂದ 5.30ರ ತನಕ ಸಾಗುವ 1 ವರ್ಷ ಅವಧಿಯ 500 ಗಂಟೆಗಳ ಈ ತರಗತಿ 2020ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ. ಈ ತರಬೇತಿ ಐಎಎಸ್ ಪ್ರಿಲಿಮಿನರಿ ಪರೀಕ್ಷೆಯ ಪೇಪರ್ 1 ಪತ್ರಿಕೆಯ ಜನರಲ್ ಸ್ಟಡೀಸ್, ಪೇಪರ್ 2 ಪತ್ರಿಕೆಯ ಆಪ್ಟಿಟ್ಯೂಡ್, 2ನೇ ಹಂತದ ಮೈನ್ಸ್ ಪರೀಕ್ಷೆಯ ಎಸ್ಸೆ, ಎಥಿಕ್ಸ್, ಜನರಲ್ ನಾಲೇಜ್ ಮುಂತಾದ ಪರೀಕ್ಷೆಯ ಮುಖ್ಯ ವಿಷಯಗಳಿಗೆ ಸಂಬಂಧಿಸಿದಂತೆ ತರಗತಿಗಳು ನಡೆಯಲಿವೆ. ತದನಂತರ ತರಬೇತಿಯ ಅಂತ್ಯದಲ್ಲಿ ಪ್ರಿಲಿಮಿನರಿ ಪತ್ರಿಕೆಯ ಡಿಸ್ಕಸನ್ ನಡೆಯಲಿದೆ.
ವೀಕೆಂಡ್‌ನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ವಾರದ ದಿನ (ಬೆ. 9.30ರಿಂದ ಸಾ. 6.30ರ ತನಕ) ಸೋಮವಾರದಿಂದ ಶುಕ್ರವಾರದ ವರೆಗೆ ಬಿಡುವಿನ ಸಮಯದಲ್ಲಿ ಪ್ರತಿದಿನ ಪ್ರೈಮ್ ಲೈಬ್ರೆರಿಯ ಯಾವುದಾದರೊಂದು ದಿನಪತ್ರಿಕೆಯಲ್ಲಿ ಬರುವ ಪ್ರಚಲಿತ ವಿದ್ಯಮಾನ, ಪ್ರಮುಖ ಸಂಪಾದಕೀಯ ವಿಷಯಗಳ ಟಿಪ್ಪಣಿ, ಗುಂಪು ಚರ್ಚೆ, ಆನ್‌ಲೈನ್ ಲೈವ್ ಕ್ಲಾಸ್ ಮುಂತಾದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು.
ಐಎಎಸ್ ತರಬೇತಿಗೆ ಸೇರ ಬಯಸುವ ಅಭ್ಯರ್ಥಿಗಳು ಜು. 21ರಂದು ನಡೆಯಲಿರುವ ಪ್ರವೇಶ ಪರೀಕ್ಷೆ ಬರೆಯಬೇಕು. ಆಸಕ್ತರು ಹೆಚ್ಚಿನ ಮಾಹಿತಿಗೆ ಬ್ರಹ್ಮಗಿರಿ ಲಯನ್ಸ್ ಭವನ ಹತ್ತಿರದ ಗ್ರೇಸ್ ಮೇನರ್ ಬಿಲ್ಡಿಂಗ್‌ನಲ್ಲಿರುವ ಪ್ರೈಮ್ ಕೇಂದ್ರವನ್ನು ಸಂಪರ್ಕಿಸಬಹುದೆಂದು ನಿರ್ದೇಶಕರ ಪ್ರಕಟನೆ ತಿಳಿಸಿದೆ.