ಬಂಟ್ವಾಳ: ಗಾಂಜಾ ಹೊಂದಿದ್ದ ಓರ್ವ ವ್ಯಕ್ತಿಯನ್ನು ಶನಿವಾರ ಬಂಟ್ವಾಳದಲ್ಲಿ ಬಂಧಿಸಲಾಗಿದೆ..
ಅಮೀರ್ ಹುಸೈನ್ (45) ಬಂಧಿತ ಆರೋಪಿ. ಈತನನ್ನು ಬಂಟ್ವಾಳದ ತುಂಬೆ ಎಂಬಲ್ಲಿ ಬಂಧಿಸಲಾಗಿದ್ದು, 39,000 ಮೌಲ್ಯದ 1 ಕೆಜಿ 330 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಈತ ಮಂಗಳೂರಿನ ಮೂಡುಶೆಡ್ಡೆಯ ಓರ್ವ ವ್ಯಕ್ತಿಯಿಂದ ಗಾಂಜಾ ಪಡೆದಿದ್ದ ಎಂದು ತಿಳಿದು ಬಂದಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












