ಮಂಗಳೂರು: ಭಾರೀ ಸಿಡಿಲು ಮಳೆಗೆ ಹಲವೆಡೆ ಹಾನಿ

ಮಂಗಳೂರು: ದ.ಕ ಪರಿಸರದಲ್ಲಿ ಸೋಮವಾರ ಸಂಜೆ ಹೊತ್ತಿಗೆ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು ಹಲವೆಡೆ ಹಾನಿಯಾಗಿರುವ ವರದಿಯಾಗಿದೆ.

ವಾಮಂಜೂರಿನ ಅಮೃತ ನಗರದಲ್ಲಿ ಸಿಡಿಲಾಘಾತಕ್ಕೆ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಸ್ಪೋಟಗೊಂಡಿವೆ. ಈ ಸಂದರ್ಭ ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿನ ಕಿವಿಗೆ ಹಾನಿಯಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಬಿದ್ರಿ ಹಾಗೂ ಕಿನ್ನಿಗೋಳಿ ಪರಿಸರದಲ್ಲಿ ಹಲವಾರು ಮನೆಗೆ ಸಿಡಿಲು ಬಡಿದಿದ್ದು ಬಹುತೇಕ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ಘಟನೆಯಿಂದ ಜನರಿಗೆ ಹಾನಿಯಾಗಿರುವ ವರದಿಯಾಗಿಲ್ಲ.