ಹಮಾಸ್ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್: ಕಚ್ಚಾ ತೈಲ ಬೆಲೆ ಗಗನಕ್ಕೇರಿಕೆ

ಟೆಲ್ ಅವೀವ್: ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲ್ ದಾಳಿ ನಡೆಸಿ 600ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟ ದಾರುಣ ಘಟನೆಯ ಬಳಿಕ ಇಸ್ರೇಲ್‌ನ ಸೇನೆಯು ಭಾನುವಾರದಂದು ಗಾಜಾದ ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್ ಅನ್ನು ಹೊಡೆದುರುಳಿಸಿದೆ. ಇಸ್ರೇಲಿನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಿನಗಳಲ್ಲಿ ಒಂದಾಗಿರುವ ಈ ಸನ್ನಿವೇಶವನ್ನು ದೇಶವು ಸಮರ್ಥವಾಗಿ ಎದುರಿಸುತ್ತಿದ್ದು, ಭಾರತ ಸಹಿತ ವಿಶ್ವದಾದ್ಯಂತದ ದೇಶಗಳು ಇಸ್ರೇಲಿಗೆ ಬೆಂಬಲ ನೀಡುತ್ತಿವೆ.

ಹಮಾಸ್ ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ಗಳ ಸುರಿಮಳೆಗೈದ ಮತ್ತು ನಾಗರಿಕರನ್ನು ಹೊಡೆದುರುಳಿಸಿದ ಮತ್ತು ಕನಿಷ್ಠ 100 ಜನರನ್ನು ಒತ್ತೆಯಾಳಾಗಿರಿಸಿದ ನಂತರ “ದೀರ್ಘ ಮತ್ತು ಕಷ್ಟಕರ” ಯುದ್ಧಕ್ಕೆ ತಮ್ಮನ್ನು ಸಿದ್ಧಪಡಿಸುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನು ಕೇಳಿಕೊಂಡಿದ್ದರು.

ತನ್ನ ಮೇಲಿನ ದಾಳಿಗೆ ಇಸ್ರೇಲ್ ಪ್ರತೀಕಾರ ತೆಗೆದುಕೊಳ್ಳುತ್ತಿದ್ದು, ಗಾಜಾ ಪಟ್ಟಿಯು 15 ವರ್ಷಗಳಲ್ಲಿ ತನ್ನ ಮಾರಣಾಂತಿಕ ದಿನಗಳನ್ನು ಅನುಭವಿಸುತ್ತಿದ್ದು, ಇಸ್ರೇಲಿ ವೈಮಾನಿಕ ದಾಳಿಗಳು 24 ಗಂಟೆಗಳಲ್ಲಿ ಸುಮಾರು 300 ಪ್ಯಾಲೆಸ್ಟೀನಿಯನ್ನರನ್ನು ಕೊಂದಿವೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯುದ್ದ ಸನ್ನಿವೇಶದಲ್ಲಿ ತೈಲ ಬೆಲೆಗಳು ಸೋಮವಾರ ನಾಲ್ಕು ಪ್ರತಿಶತಕ್ಕಿಂತ ಹೆಚ್ಚು ಏರಿದ್ದು, ಸಮೃದ್ಧ ಪ್ರದೇಶದಿಂದ ಸಂಭವನೀಯ ಪೂರೈಕೆ ಆಘಾತಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.