ಹಣ ಇದ್ರೆ ಸ್ಟಾಕ್ ಮಾಡ್ಕೊಳ್ಳಿ : ಶೀಘ್ರದಲ್ಲಿಯೇ ಈ ವಸ್ತುವಿನ ಬೆಲೆ ಏರಿಕೆ

ಬೆಂಗಳೂರು: ಮೊದಲೇ ಬೆಲೆ ಬಿಸಿ ಏರಿಕೆ (Price hike) ಬಿಸಿಯಲ್ಲಿ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ನಾವು ದಿನನಿತ್ಯ ಬಳಕೆ ಮಾಡುವ ಅಕ್ಕಿ‌ (Rice Price) ಮತ್ತಷ್ಟು ದುಬಾರಿಯಾಗಲಿದೆ. ಪೆಟ್ರೋಲ್, ಡೀಸೆಲ್, ತರಕಾರಿ ಬೆಲೆ ಏರಿಕೆ ನಡುವೆ ಇದೀಗ ನಾವು ಪ್ರತಿದಿನ ಸೇವೆನೆಗೆ ಬಳಸೋ ಅಕ್ಕಿಯ ದರ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯದಲ್ಲಿ ಮುಂಗಾರು ಮಳೆ (Monsoon Rains) ವಿಫಲವಾಗಿದೆ. ನೂರಕ್ಕೂ ಹೆಚ್ಚು ಬರಗಾಲ ತಾಲೂಕು ಎಂದು ಸರ್ಕಾರ‌ ಘೋಷಿಸಿದೆ.ಮುಂದೆ ಅಕ್ಕಿ ದರ ಇನ್ನೆಷ್ಟು ಏರಿಕೆ ಆಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಅಕ್ಕಿಯ ದರ ಹೀಗಿದೆ
ಅಕ್ಕಿಯ ವಿಧ ಹಳೆ ದರ ಹೊಸ ದರ
ಸ್ಟೀಮ್‌ ಅಕ್ಕಿ 52 ರಿಂದ 62 ರೂಪಾಯಿ 60 ರಿಂದ 64 ರೂಪಾಯಿ
ಸೋನಾ ಮಸೂರಿ 55 ರಿಂದ 64 ರೂಪಾಯಿ 64 ರಿಂದ 70 ರೂಪಾಯಿ
ಕೋಲಮ್ ರೈಸ್ 60 ರಿಂದ 70 ರೂಪಾಯಿ 70 ರಿಂದ 80 ರೂಪಾಯಿಇಡೀ ರಾಜ್ಯಕ್ಕೆ ಶೇ.70ರಷ್ಟು ಸೋನಾ ಮಸೂರಿ ಅಕ್ಕಿ ಪೂರೈಕೆ ಮಾಡೋದು ತುಂಗಭದ್ರಾ ಜಲಾಶಯದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳು.

ಸೋನಾ ಮಸೂರಿ ಅಕ್ಕಿ ಬೆಲೆ ಹೆಚ್ಚಳ

ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಭತ್ತ ಇಳುವರಿಯೂ ಶೇ.40ರಷ್ಟು ಇಳಿಮುಖವಾಗಿದೆ. ಇದರ ಪರಿಣಾಮ ಸದ್ಯ 50-60 ರೂಪಾಯಿಗೆ ಸಿಗುತ್ತಿದ್ದ ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ 10 ರೂ.ಗಳಷ್ಟು ಹೆಚ್ಚಳವಾಗಿದೆ.

ಪೂರೈಕೆಯಲ್ಲಿ ಕೊರತೆ

ಕಳೆದ‌ ವರ್ಷ ನೆರೆ ಪ್ರವಾಹದಿಂದ ನಿರೀಕ್ಷೆಯಷ್ಟು ರಾಜ್ಯದಲ್ಲಿ ಭತ್ತ ಬೆಳೆದಿದ್ದಿಲ್ಲ. ಇದರಿಂದ ಕೆಜಿ ಅಕ್ಕಿಗೆ ಐದು ರೂಪಾಯಿ ಹೆಚ್ಚಾಗಿತ್ತು. ಇದೀಗ ಬರಗಾಲದಿಂದ ಬೆಂಗಳೂರಿಗೆ ಪ್ರಮುಖವಾಗಿ ಸರಬರಾಜು ಆಗುತ್ತಿದ್ದ ಸೋನಾ ಮಸೂರಿ ಅಕ್ಕಿ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ.

ನೆರೆಯ ಮಹಾರಾಷ್ಟ್ರ, ಗುಜರಾತ್ ನಲ್ಲೂ ಅಕ್ಕಿ ಬೇಡಿಕೆ ಹೆಚ್ಚಿದ್ದು, ಇಲ್ಲಿ ರಫ್ತಿಗೂ ಹೆಚ್ಚಿನ ಬೆಲೆ ಕೇಳುತ್ತಿದ್ದಾರೆ. ಇದರಿಂದ ಮುಂದಿನ ಆರು ತಿಂಗಳು ಬೆಲೆ ಇನ್ನಷ್ಟು ಹೆಚ್ಚಾಗಲಿದೆ. ಇದರ ಬಿಸಿ ರಾಜಧಾನಿ ಜನರು ಎದುರಿಸಬೇಕಾಗಿದೆ. ಒಟ್ಟಿನಲ್ಲಿ ಮಳೆಯ ಕೊರತೆಯಿಂದಾಗಿ ಒಂದೊಂದೇ ವಸ್ತುಗಳ ದರ ಏರಿಕೆಯಾಗುತ್ತಿದೆ. ಬೆಲೆ ಏರಿಕೆಯ ಪ್ರಮಾಣ ಮಧ್ಯಮ ವರ್ಗದ ಜನರ ಮೇಲೆ ಬೀಳಲಿದೆ.