232 ಪ್ಯಾಲೆಸ್ಟೀನ್ ಜನ ಸಾವು, ಹಮಾಸ್‌ ನಾಯಕನ ಮನೆ ಹೊಕ್ಕ ಫೈಟರ್‌ಜೆಟ್‌ : ಇಸ್ರೇಲ್​ ಪ್ರತಿದಾಳಿ

ರಮಾಲ್ಲಾಹ (ಪ್ಯಾಲೆಸ್ಟೀನ್​): ಪ್ಯಾಲೆಸ್ಟೀನ್​ ಉಗ್ರಗಾಮಿ ಪಡೆಯ ಹಮಾಸ್​ ದಾಳಿಗೆ ಇಸ್ರೇಲ್​ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್​ ನಡೆಸಿದ ಪ್ರತಿದಾಳಿಯಲ್ಲಿ ಸುಮಾರು 232 ಪ್ಯಾಲೆಸ್ಟೀನಿಯನ್​ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಹಮಾಸ್ ನಾಯಕರನ್ನೂ ಇಸ್ರೇಲ್​ ರಕ್ಷಣಾ ಪಡೆ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.ಹಮಾಸ್​ ಉಗ್ರಗಾಮಿಗಳ ದಾಳಿಗೆ ಇಸ್ರೇಲ್​ ಪ್ರತಿದಾಳಿ ನಡೆಸುತ್ತಿದ್ದು, ಗಾಜಾ ಪಟ್ಟಿಯಲ್ಲಿ ಸುಮಾರು 232 ಪ್ಯಾಲೆಸ್ಟೀನಿಯನ್​ಗಳು ಸಾವನ್ನಪ್ಪಿದ್ದಾರೆ ಅಲ್ಲದೇ, ಅನೇಕ ಇಸ್ರೇಲ್​ ನಾಗರಿಕರು ಹಾಗೂ ಸೇನಾ ಸಿಬ್ಬಂದಿಯನ್ನು ಹಮಾಸ್​ ಭಯೋತ್ಪಾದಕರು ಗಾಜಾಕ್ಕೆ ಅಪಹರಿಸಿದ್ದಾರೆ ಎಂದು ವರದಿಯಾಗಿದೆ. […]

ಇಸ್ರೋ : ಆದಿತ್ಯ-ಎಲ್1 ಮಿಷನ್: ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ

ನವದೆಹಲಿ : ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ಯೋಜನೆ ಕುರಿತು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೋ) ಮಾಹಿತಿ ನೀಡಿದ್ದು, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಸುಮಾರು 16 ಸೆಕೆಂಡುಗಳ ಪಥ ಸರಿಪಡಿಸುವಿಕೆ ಕಾರ್ಯ (TCM – Trajectory Correction Maneuvre) ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದೆ.ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದ್ದು, ನಿರಂತರವಾಗಿ ಸೂರ್ಯನ ಕಡೆಗೆ ಚಲಿಸುತ್ತಿದೆ. ಇಂದು (ಅಕ್ಟೋಬರ್ 6 ರಂದು) ನೌಕೆಯ ಪಥ ಸರಿಪಡಿಸುವಿಕೆ ಪ್ರಕ್ರಿಯೆ ಮಾಡಲಾಯಿತು. ಬಾಹ್ಯಾಕಾಶ ನೌಕೆಯು L1 ಸುತ್ತ […]

ಕುಲ್​ದೀಪ್​, ಬುಮ್ರಾ ಆಸಿಸ್​ಗೆ​ ಆರಂಭಿಕ ಆಘಾತ

ಚೆನ್ನೈ (ತಮಿಳುನಾಡು): ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ಇಂದು ತನ್ನ ಮೊದಲ ಪಂದ್ಯವನ್ನು ಆಸ್ಪ್ರೇಲಿಯಾ ವಿರುದ್ಧ ಆಡುತ್ತಿದೆ.ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾಕ್ಕೆ ಹೊಸ ಬಾಲ್​ನಲ್ಲಿ ಬುಮ್ರಾ ಆರಂಭಿಕ ಆಘಾತವನ್ನು ನೀಡಿದರೆ, ನಂತರ ಪಿಚ್​ಗೆ ಸೆಟ್​ ಆಗಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ವಾರ್ನರ್​​ನ್ನು ಕುಲ್ದೀಪ್ ಕಾಡಿದರು. ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಐದನೇ ಪಂದ್ಯದಲ್ಲಿ ಇಂದು ಭಾರತ ಹಾಗೂ ಆಸ್ಪ್ರೇಲಿಯಾ ಮುಖಾಮುಖಿಯಾಗಿವೆ. 5 ರನ್​ ಗಳಿಸಿದ್ದ ಆಸ್ಟ್ರೇಲಿಯಾಕ್ಕೆ ಬುಮ್ರಾ ಶಾಕ್​ ಕೊಟ್ಟರು. ನಂತರ ಎರಡನೇ ವಿಕೆಟ್​ […]

ಡಿಸಿಎಂ ಡಿ ಕೆ ಶಿವಕುಮಾರ್ : ರಾಜ್ಯಾದ್ಯಂತ ಪಟಾಕಿ ಗೋದಾಮುಗಳ ಸುರಕ್ಷತಾ ಸಮೀಕ್ಷೆ

ಬೆಂಗಳೂರು: ರಾಜ್ಯಾದ್ಯಂತ ಇರುವ ಪಟಾಕಿ ಗೋದಾಮುಗಳ ಸರ್ವೆ ನಡೆಸಿ, ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ‌ ಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿರುವ ಪಟಾಕಿ ಗೋದಾಮುಗಳಿಗೆ ಸುರಕ್ಷತೆ ಹಾಗೂ ಪರಿಶೀಲನೆ ಮಾಡಲು ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ನೋಟಿಸ್​ ನೀಡಿ ಸೂಚನೆ ನೀಡಿರುವುದಾಗಿ ಡಿಸಿಎಂ ಡಿ ಕೆ ಶಿವಕುಮಾರ್​ ತಿಳಿಸಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಇನ್ನು ಮುಂದೆ ಯಾವುದೇ ಅವಘಡ ಆಗದಂತೆ ಎಚ್ಚರವಹಿಸಲಾಗುವುದು. ರಾಜ್ಯದಲ್ಲಿ ಇರುವ ಪಟಾಕಿ ಗೋದಾಮುಗಳಿಗೆ ಸುರಕ್ಷತೆ ಹಾಗೂ ಪರಿಶೀಲನೆ […]

ಮಾರಾಟ ಕುಸಿತ : ಚೀನಾದಲ್ಲಿ ಸ್ಮಾರ್ಟ್​ಪೋನ್ ತಯಾರಿಕೆ

ನವದೆಹಲಿ: ಚೀನಾದ ಸ್ಮಾರ್ಟ್​ಫೋನ್ ಮಾರುಕಟ್ಟೆ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಕುಸಿತ ಕಂಡಿದೆ. ಜನವರಿಯಿಂದ ಆಗಸ್ಟ್​ವರೆಗೆ ಚೀನಾ ಕೇವಲ 679 ಮಿಲಿಯನ್ ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸಿದೆ. 2022 ರ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 7.5 ರಷ್ಟು ಕಡಿಮೆಯಾಗಿದೆ ಎಂದು ದೇಶದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದ ಅಂಕಿ ಅಂಶಗಳು ತಿಳಿಸಿವೆ. ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಚೀನಾದ ಸ್ಮಾರ್ಟ್​ಪೋನ್ ಮಾರುಕಟ್ಟೆ ಕುಸಿತ ಕಂಡಿದೆ. ಮುಂಬರುವ ಚಳಿಗಾಲದ ಮಾರಾಟದ ಋತುವಿನಲ್ಲಿ ಹುವಾವೇ […]