ಕಾರ್ಕಳ ಪ.ಪೂ.ಕಾಲೇಜಿನಲ್ಲಿ ಲಕ್ಷಾಂತರ ಮೌಲ್ಯದ ಲ್ಯಾಬ್ ಪುಡಿ ಪುಡಿ:ಇದು ಬೆಕ್ಕಿನ ಕೆಲಸ ಎಂದು ನುಣುಚಿಕೊಂಡ ಮುಖ್ಯಸ್ಥರು !

x press ವರದಿ : ಚರಣ್‌ ಸಂಪತ್,ಕಾರ್ಕಳ

ಕಾರ್ಕಳ : ಸರಕಾರಿ ‌ಪದವಿ ಪೂರ್ವ ಕಾಲೇಜಿನಲ್ಲಿ ಕಳ್ಳ ಬೆಕ್ಕಿನ ಉಪಟಳಕ್ಕೆ ಲಕ್ಷಾಂತರ ‌ಬೆಲೆ‌ಬಾಳುವ ಬಯೋಲಜಿ ಪರಿಕರಗಳನ್ನು ಹುಡಿಹುಡಿಗೈದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 130 ವರ್ಷಗಳ ಇತಿಹಾಸ ಹೊಂದಿದ ಸರಕಾರಿ‌ ಪದವಿಪೂರ್ವ‌ ಕಾಲೇಜಿನಲ್ಲಿ ಉಪನ್ಯಾಸಕರ ಅಂತಃಕಲಹದಿಂದ ಇದೀಗ ಅಕ್ಷರಶ ರಣಾಂಗಣವಾಗಿದೆ. ಬಯೊಲಜಿ ಶಿಕ್ಷಕಿ ಜಯಶ್ರೀ ಹೆಗ್ಡೆಯ ವರ್ಗಾವಣೆಗೊಳಿಸಲು‌ ಹಾಗೂ ಅವರ ಮೇಲಿನ ದ್ವೇಷ ಸಾಧನೆಗಾಗಿ ಇಂತಹ ಕೃತ್ಯ ‌ಎಸಗಿದ್ದಾರೆ ಎನ್ನುವುದು ಅವರ ವಾದವಾಗಿದೆ. ಅದರೆ ಪ್ರಾಶುಂಪಾಲ ಮಾಧವ್ ಭಟ್ ಮಾತ್ರ ಇದು ಬೆಕ್ಕಿನಿಂದ ಅಗಿದ ಘಟನೆ‌ ಎನ್ನುವ ಹೇಳಿಕೆ ನೀಡುವ ಮೂಲಕ ಕೈತೊಳೆದು ಕೊಂಡಿದ್ದಾರೆ. ಬೆಕ್ಕಿನಿಂದ ಗಾಜುಗಳು ಒಡೆದು‌ ಹೋಗಬಹುದು‌. ಅದರೆ ಮೈಕ್ರೋ ಸ್ಕೋಪ್, ದಾಖಲೆಗಳು ಮಾಯಮಾಗಿವೆ. ಜತೆಗೆ ಕೆಲ‌ವಸ್ತುಗಳು ಕಾಣೆಯಾಗಿರುವ ಕುರಿತುಇದೀಗ ಕಳ್ಳ ಬೆಕ್ಕನ್ನು‌ ಹಿಡಿಯುವಂತೆ ಡಿಡಿಪಿಯು ಅವರಿಗೆ ದೂರು ನೀಡಲಾಗಿದೆ.

ಆಗಿದ್ದೇನು?
ಬಯೋಲಾಜಿ ಉಪನ್ಯಾಸಕಿ ಜಯಶ್ರೀ ಹೆಗ್ಡೆ ಮುನಿಯಾಲು ಸರಕಾರಿ ಪದವಿಪೂರ್ವ ಕಾಲೇಜಿನಿಂದ ಕಳೆದ ಅಗಸ್ಟ್ 2018 ರಂದು ಕಾರ್ಕಳ ‌ಪದವಿಪೂರ್ವ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಬಳಿಕ‌ ಅನಾರೋಗ್ಯದ ಕಾರಣ ಅವರು 30ಜನವರಿ 2019ರಂದು ಗೈರುಹಾಜರಾಗಿದ್ದರು‌. ನಂತರ ಆರೋಗ್ಯ ಚೇತರಿಸಿದ ಬಳಿಕ 16 ಮಾರ್ಚ್ ತಿಂಗಳಿನಲ್ಲಿ ಮತ್ತೆ ಕಾಲೇಜಿಗೆ ಬಂದಿದ್ದು ಆ ಬಳಿಕ ವಿದ್ಯಾರ್ಥಿಗಳ ಪರೀಕ್ಷೆ ಮುಗಿಸಿ ಎರಡು‌ ತಿಂಗಳ ಕಾಲ ರಜೆಯಾಗಿರುವುದರಿಂದ ಜೂನ್ ತಿಂಗಳಿನಲ್ಲಿ ಹೊಸ ತರಗತಿ ಅರಂಭವಾಗಿತ್ತು. ಲ್ಯಾಬ್ ನ ಕೀ ನೀಡುವಂತೆ ಪ್ರಾಂಶುಪಾಲರ ಬಳಿ ಹಲವು ಬಾರಿ‌ ಮನವಿ ಮಾಡಲಾಗಿದ್ದು ಇಂದು ನಾಳೆ ಎಂಬ ನೆಪ ಒಡ್ಡಿ ಕೊಠಡಿಯ ಬಾಗಿಲು ತೆಗೆಯದೇ ಸತಾಯಿಸಿ ಕೊನೆಗೆ‌ ಮಂಗಳವಾರ ಬಾಗಿಲು ತೆರೆದು ನೋಡಿದಾಗ ಲ್ಯಾಬ್ ಧ್ವಂಸವಾಗಿದ್ದ ಅಂಶ ಬೆಳಕಿಗೆ ಬಂದಿದೆ‌. ಕೂಡಲೇ ‌ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದು ಈ ಬಗ್ಗೆ ತನಿಖೆ ಮಾಡಿ ಎಂದಾಗ‌ ಪ್ರಾಂಶುಪಾಲ ಮಾಧವ್ ಭಟ್ ಇದು ಬೆಕ್ಕಿನಿಂದ ಅಗಿದೆ ಅಂತ ಹೇಳಿ ನುಣುಚಿಕೊಂಡಿದ್ದಾರೆ. ಲಕ್ಷಗಟ್ಟಲೆ ಬೆಳೆಬಾಳುವ ಶಾಲಾ‌ ಸಾಮಗ್ರಿಗಳು‌ ಹಾಗೂ ದಾಖಲೆಗಳು‌ ನಾಪತ್ತೆಯಾಗಿವೆ. ಕಾರ್ಕಳದ ಐದು ಕಾಲೇಜುಗಳಿಗೆ ಉಪಯೋಗಕ್ಕೆ ಇದ್ದ ಲ್ಯಾಬ್ ಇದೀಗ ಸಂಪೂರ್ಣ ಉಡೀಸ್ ಅಗಿದೆ.
ಮುಂದೆ ಏನು…?
ನನ್ನ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಕಳೆದ ಹಲವು ‌ತಿಂಗಳಿನಿಂದ ನಾನು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಬಳ‌‌ ನೀಡದೇ‌ ಹಲವು ತಿಂಗಳು ಕಳೆದಿದೆ. ಸಾಕಷ್ಟು ಮಾನಸಿಕ ಕಿರುಕುಳ ‌ನೀಡಿದ್ದರೂ ಮಕ್ಕಳಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ‌ಶಿಕ್ಷಣ ನೀಡುತ್ತಿದ್ದೇನೆ ಎಂದು ಈ ಉಪನ್ಯಾಸಕಿ ಮಾಧ್ಯಮದ ಮುಂದೆ ಬಿಕ್ಕಿಬಿಕ್ಕಿ‌ ಅತ್ತಿದ್ದಾರೆ.

ಲ್ಯಾಬ್ ನ ಒಳಗೆ ಬೆಕ್ಕು ಸೇರಿತ್ತು ಎಂದು ಅಟೆಂಡರ್ ರಾಮ ಹೇಳಿದ. ಆದರೆ ಇದು ಬೆಕ್ಕಿನದ್ದೇ ಕೆಲಸ ಎನ್ನುತ್ತಾರೆ ಪ್ರಾಂಶುಪಾಲ ಮಾಧವ್ ಭಟ್.

ಈ ಬಗ್ಗೆ ತನಿಖೆ ನಡೆಸುತ್ತೇನೆ. ಈಗಾಗಲೇ‌ ಹಲವು ದೂರುಗಳು ‌ಬಂದಿದ್ದು‌ ಕೂಡಲೇ ತನಿಖೆ‌ ನಡೆಸಿ ತಪ್ಪಿ ತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಎನ್ನುವ ಹೇಳಿಕೆ ನೀಡಿದ್ದಾರೆ ಡಿಡಿಪಿಯು ಸುಬ್ರಮಣ್ಯ ಜೋಶಿ.