ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರತೀ ನಾಗರೀಕರು ಘನ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ, ಒಣಕಸ, ಅಪಾಯಕಾರಿ ಕಸವನ್ನಾಗಿ ಬೇರ್ಪಡಿಸಿ, ಹಸಿಕಸವನ್ನು ತಮ್ಮ ತಮ್ಮ ಸ್ವಂತ ಸ್ಥಳದಲ್ಲಿ ಪೈಪ್ ಕಾಂಪೋಸ್ಟ್, ಪಿಟ್‍ಕಾಂಪೋಸ್ಟ್ ಮೂಲಕ ವಿಲೇವಾರಿಗೊಳಿಸುವಂತೆ ಹಾಗೂ ಒಣಕಸವನ್ನು ಸಂಗ್ರಹಿಸಿ ಪ್ರತಿ 15 ದಿನಕ್ಕೊಮ್ಮೆ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡುವುದು.
ಡೈಪರ್ಸ್, ಸ್ಯಾನಿಟರಿ ಪ್ಯಾಡ್ ಇತ್ಯಾದಿಗಳನ್ನು ಪೇಪರ್ ನಲ್ಲಿ ಸುತ್ತಿ ಪ್ರತ್ಯೇಕವಾಗಿ ನೀಡತಕ್ಕದ್ದು ಹಾಗೂ ಅಪಾಯಕಾರಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಾನುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವುದು ಕಡ್ಡಾಯವಾಗಿದ್ದು, ಈ ಎಲ್ಲ ಕಸಗಳನ್ನು ಮಿಶ್ರ ಮಾಡಿ ನೀಡಿದರೆ ಅದನ್ನು ಮೊದಲನೇ ಬಾರಿ ಸ್ವೀಕರಿಸಲಾಗುವುದಿಲ್ಲ, ಎರಡನೇ ಬಾರಿ ಘನ ತ್ಯಾಜ್ಯ ವಿಲೇವಾರಿ ಉಪನಿಯಮಗಳು 2016 ರಂತೆ ದಂಡ ವಿಧಿಸಲಾಗುವುದು.
ನಾಗರೀಕರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಿ ಪಟ್ಟಣ ಪಂಚಾಯತ್‍ನೊಂದಿಗೆ ಕೈ ಜೋಡಿಸಬೇಕಾಗಿ ಕೋರಲಾಗಿದ್ದು, ಮೇಲ್ಕಂಡ ಎಲ್ಲಾ ನಿಯಮಗಳನ್ನು ಪಾಲನೆಯಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಲು ಪಡುಕೆರೆ ವಾರ್ಡ್- ಲೋಹಿತ್ (ನೋಡೆಲ್ ಅಧಿಕಾರಿ), ಶಿವರಾಜ್ ಆರ್.ಎನ್(ಪೌರಕಾರ್ಮಿಕ), ವಿಷ್ಣುಮೂರ್ತಿ ವಾರ್ಡ್-ಮಾಲತಿ(ಪೌರಕಾರ್ಮಿಕ), ಗೆಂಡೆಕೆರೆ ವಾರ್ಡ್- ಸಮಿತಾ ಹೆಚ್ ವಿ (ನೋಡಲ್‍ಅಧಿಕಾರಿ), ತೋಡುಕಟ್ಟು – ವಾರ್ಡ್ ರತ್ನಾಕರ (ಪೌರಕಾರ್ಮಿಕ), ರೋಶನ್(ಪೌರಕಾರ್ಮಿಕ), ಕಾರ್ತಟ್ಟು ವಾರ್ಡ್- ಪ್ರವೀಣ್ (ನೋಡಲ್‍ಅಧಿಕಾರಿ), ಮಾರಿಗುಡಿ ವಾರ್ಡ್ ಸುರೇಶ್. ಪಿ (ಪೌರಕಾರ್ಮಿಕ), ಸುಗುಣ(ಪೌರಕಾರ್ಮಿಕ), ಪೇಟೆ ವಾರ್ಡ್- ಶೃತಿ(ನೋಡಲ್‍ಅಧಿಕಾರಿ), ಬಡಾಹೋಳಿ ವಾರ್ಡ್- ಪ್ರದೀಪ್(ಪೌರಕಾರ್ಮಿಕ), ವೈಶಾಲಿ(ಪೌರಕಾರ್ಮಿಕ), ಮೂಡೋಳಿ ವಾರ್ಡ್ ಚಂದ್ರಶೇಖರ ಸೋಮಯಾಜಿ(ನೋಡಲ್ ಅಧಿಕಾರಿ), ವಿಕ್ಟರ್(ಡ್ರೈವರ್), ತೆಂಕುಹೋಳಿ ವಾರ್ಡ್- ಸುರೇಶ್ ಬಿ (ಪೌರಕಾರ್ಮಿಕ), ಪಡುಹೋಳಿ ವಾರ್ಡ್- ಪ್ರತಿಮಾ (ನೋಡೆಲ್ ಅಧಿಕಾರಿ), ಭಗವತಿ ವಾರ್ಡ್- ಸುರೇಶ್ ಕೆ (ಪೌರಕಾರ್ಮಿಕ), ಕೃಷ್ಣ (ಪೌರಕಾರ್ಮಿಕ), ಪಾತಾಳಬೆಟ್ಟು ವಾರ್ಡ್- ಶಾರದಾ ಪಿ. ಹಿರೇಮನಿ (ನೋಡೆಲ್ ಅಧಿಕಾರಿ), ದೊಡ್ಮನೆಬೆಟ್ಟು ವಾರ್ಡ್- ಉದಯ(ಪೌರಕಾರ್ಮಿಕ), ಇಂದಿರಾ(ಪೌರಕಾರ್ಮಿಕ), ಚೆಲ್ಲಮಕ್ಕಿ ವಾರ್ಡ್- ಶಿವಕುಮಾರ್ (ನೋಡೆಲ್ ಅಧಿಕಾರಿ), ಯಕ್ಷಮಠ ವಾರ್ಡ್- ಮಹಾಲಿಂಗ(ಡ್ರೈವರ್), ನಳಿನಿ(ಪೌರಕಾರ್ಮಿಕ) ಅವರನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ.
ನಾಗರೀಕರು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಯಾವುದೇ ಸಮಿತಿಯವರು ತಮಗೆ ಬಂದ ದೂರುಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಆರೋಗ್ಯ ನಿರೀಕ್ಷಕರ ಗಮನಕ್ಕೆ ತರುವಂತೆ ಸೂಚಿಸಿದೆ.
ಹಸಿಕಸವನ್ನು ಪೈಪ್‍ಕಾಂಪೋಸ್ಟ್ ಮೂಲಕ ಸಮರ್ಪಕವಾಗಿ ನಿರ್ವಹಿಸಲು ಇಚ್ಛಿಸುವವರು ಪಟ್ಟನ ಪಂಚಾಯತ್ ಕಚೇರಿಯಿಂದ ಉಚಿತವಾಗಿ ಪೈಪ್ ಪಡೆಯಲು ಕಚೇರಿಯ ಆರೋಗ್ಯ ವಿಭಾಗದಲ್ಲಿ ಹೆಸರು ನೋಂದಾವಣಿ ಮಾಡಲು ತಿಳಿಸಿದೆ. ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೇಂದರಲ್ಲಿ ಎಸೆಯದೇ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಹಕರಿಸಲು ವಿನಂತಿಸಿದೆ. ಯಾರಾದರು ಕಸವನ್ನು ಎಸೆಯುವುದು ಕಂಡುಬಂದಲ್ಲಿ ತಕ್ಷಣವೇ ತಮ್ಮ ವಾರ್ಡ್ ಸಮಿತಿ ಗಮನಕ್ಕೆ ತರುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.