ಉಡುಪಿ: ಕಳೆದ ಒಂದು ತಿಂಗಳಿಂದ ಉಡುಪಿ ತಾಲೂಕಿನ ಆಸುಪಾಸಿನಲ್ಲಿ ಬೀದಿ ನಾಯಿಗಳ ಹಾವಳಿಯಿಂದ
ಹೆಚ್ಚುತ್ತಿರುವ ಅಪಘಾತಗಳು ಶಾಲಾ ಮಕ್ಕಳು ಹಾಗೂ ಬೈಕ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಪ್ರಾಣಘಾತಿಯಾಗಿ ಪರಿಣಮಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಭಾಸವಾಗುತ್ತಿದೆ.
ಸಾಕು ನಾಯಿಗಳನ್ನು ಸಹ ಬೆಳಿಗ್ಗೆ ಹೊರಗೆ ಬಿಡುತ್ತಿದ್ದು ಇದು ಶಾಲೆಗೆ ಹೋಗುವ ಮಕ್ಕಳಿಗೂ ಕೆಲಸಕ್ಕೆ ಹೋಗುವ ಬೈಕ್ ಸವಾರರಿಗೂ ತೊಂದರೆಯಾಗುತ್ತಿದ್ದು ಅನೇಕರು ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಂತಹ ಅಪಘಾತಗಳಿಂದ ಜೀವಕ್ಕೆ ಹಾನಿಯಾಗುವ ಮೊದಲು ಜಾಗೃತೆ ವಹಿಸುವುದು ಮುಖ್ಯ. ಇನ್ನು ಹಲವಾರು ಕಡೆಗಳಲ್ಲಿ ಲೆಕ್ಕ ಸಿಗದಷ್ಟು ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ತನಕ ಸಂಬಂಧಪಟ್ಟ ಯಾವ ಇಲಾಖೆಯ ಅಧಿಕಾರಿಗಳು ಕೂಡ ಗಮನ ಕೊಟ್ಟಿಲ್ಲ. ಈ ಬಗ್ಗೆ ಇಂದು ಮಣಿಪಾಲ ಆರಕ್ಷಕ ಠಾಣೆಗೆ ದೂರು ಸಲ್ಲಿಸಸಲಾಗುವುದು ಮತ್ತು ಬೀದಿ ನಾಯಿಗಳಿಂದ ತೊಂದರೆಗೊಳಗಾದವರು ಸಹಕರಿಸುವಂತೆ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ನಿರ್ದೇಶಕ ಉದಯ ನಾಯ್ಕ್ ತಿಳಿಸಿದ್ದಾರೆ.