ಮಂಗಳೂರು: ಗಣೇಶ ಚತುರ್ಥಿ ಹಿನ್ನೆಲೆ ಸೆ.19 ರಂದು ರಜೆ ಘೋಷಿಸಲು ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು: ಗಣೇಶ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸರ್ಕಾರಿ ರಜೆಯನ್ನು ಸೆಪ್ಟೆಂಬರ್18 ರ ಬದಲು ಸೆಪ್ಟೆಂಬರ್ 19 ರಂದು ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ. ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಬುಧವಾರ ಸೂಚನೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ, ಶಾಸಕ ಕೆ.ಪ್ರತಾಪ್ ಸಿಂಹ್ ನಾಯಕ್ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಹಬ್ಬವನ್ನು ಆಚರಿಸಲು ಸೆ.18 ರ ಸೋಮವಾರ ಸರ್ಕಾರಿ ರಜೆ ಎಂದು ಘೋಷಿಸಲಾಗಿದ್ದು, ಇದೀಗ ಅದನ್ನು ಮಾರ್ಪಡಿಸಿ ಸೆ.19 ರಂದು ರಜೆ ಘೋಷಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಾದ್ಯಂತ ಸೆ.19 ರಂದು ಗಣೇಶ ಹಬ್ಬ ಆಚರಿಸಲು ಅನುಕೂಲವಾಗಲಿದೆ.