ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಏಷ್ಯಾಕಪ್ನ ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ಮುಖಾಮುಖಿ ಆಗಿದ್ದು, 231 ರನ್ ಸ್ಪರ್ಧಾತ್ಮಕ ಗುರಿಯನ್ನು ನೇಪಾಳ ನೀಡಿದೆ.ಏಷ್ಯಾಕಪ್ನ ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ಮುಖಾಮುಖಿ ಆಗಿದ್ದು, 231 ರನ್ ಸ್ಪರ್ಧಾತ್ಮಕ ಗುರಿಯನ್ನು ನೇಪಾಳ ನೀಡಿದೆ. ರಂಭಿಕರು ಮತ್ತು ಟೇಲ್ ಎಂಡರ್ಗಳ ಬ್ಯಾಟಿಂಗ್ ಬಲದಿಂದ ನೇಪಾಳ 48.2 ಓವರ್ನಲ್ಲಿ 230 ರನ್ಗಳಿಸಿ ಆಲ್ಔಟ್ ಆಯಿತು.
ಪವರ್ ಪ್ಲೇ ಮುಕ್ತಾಯದ ನಂತರ ದಾಳಿಗೆ ಬಂದ ಅನುಭವಿ ಆಲ್ರೌಂಡರ್ ಜಡೇಜಾ ನೇಪಾಳ ಆಟಗಾರರಿಗೆ ಕಠಿಣ ತುತ್ತಾದರು. ಭೀಮ್ ಶರ್ಕಿ(7), ರೋಹಿತ್ ಪೌಡೆಲ್(5) ಮತ್ತು ಕುಶಾಲ್ ಮಲ್ಲಾ (2) ಜಡೇಜಾ ಸ್ಪಿನ್ ಜಾದೂಗೆ ಮರುಳಾಗಿ ಪೆವಿಲಿಯನ್ ಪರೇಡ್ ಮಾಡಿದರು. ಆರಂಭಿಕರಾಗಿ ಮೈದಾನಕ್ಕೆ ಬಂದಿದ್ದ ಆಸಿಫ್ ಶೇಖ್ ಒಂದೆಡೆ ವಿಕೆಟ್ ಬಿದ್ದರೂ ತಾಳ್ಮೆಯಿಂದ ಭಾರತೀಯ ಬೌಲಿಂಗ್ನ್ನು ಎದುರಿಸಿ ಅರ್ಧಶತಕ ದಾಖಲಿಸಿಕೊಂಡರು. 97 ಬಾಲ್ ಅಡಿದ ಅವರು 8 ಬೌಂಡರಿಯ ನೆರವಿನಿಂದ 58 ರನ್ ಗಳಿಸಿದರು. 30ನೇ ಓವರ್ ಮಾಡಲು ಬಂದ ಸಿರಾಜ್, ಆಸಿಫ್ ಶೇಖ್ ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ನೇಪಾಳದ ಆರಂಭಿಕರು, ಶಮಿ ಮತ್ತು ಸಿರಾಜ್ ಬೌಲಿಂಗ್ಗೆ ನಿರಾಳವಾಗಿ ಬ್ಯಾಟ್ ಬೀಸಿದರು. ಮೊದಲ ಓವರ್ನ ಕೊನೆಯ ಬಾಲ್ನಲ್ಲಿ, ಎರಡನೇ ಮತ್ತು ಐದನೇ ಓವರ್ನಲ್ಲಿ ಕ್ಯಾಚ್ ಕೈಚೆಲ್ಲಿದ್ದರಿಂದ ನೇಪಾಳಿಗರಿಗೆ ಮೂರು ಜೀವದಾನ ಸಿಕ್ಕಿತು. ಸರಿಯಾಗಿ ಬಳಸಿಕೊಂಡ ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ 10ನೇ ಓವರ್ಗೆ 65ರನ್ ಜೊತೆಯಾಟ ಮಾಡಿದರು. ಪವರ್ ಪ್ಲೇಯ ಕೊನೆಯ ಓವರ್ನ ಅಂತಿಮ ಬಾಲ್ನಲ್ಲಿ ಕುಶಾಲ್ ಭುರ್ಟೆಲ್ (38) ಶಾರ್ದೂಲ್ ಬಾಲ್ನಲ್ಲಿ ಕಿಶನ್ ಕ್ಯಾಚ್ ಕೊಟ್ಟರು.
ಭಾರತದ ಪರ ಸಿರಾಜ್ ದುಬಾರಿ ಆದರು. ಆದರೆ 3 ವಿಕೆಟ್ ಕಬಳಿಸಿದರು. ಅನುಭವಿ ಜಡೇಜಾ ನೇಪಾಳದ ಮಧ್ಯಮ ಕ್ರಮಾಂಕದ ಮೂವರ ವಿಕೆಟ್ ಪಡೆದರೆ, ಶಾರ್ದೂಲ್, ಹಾರ್ದಿಕ್, ಶಮಿ ತಲಾ ಒಂದು ವಿಕೆಟ್ ಕಬಳಿಸಿದರು.
ಭಾರತಕ್ಕೆ ಕಾಡಿದ ಟೇಲ್ ಎಂಡ್: ಮಧ್ಯಮ ಕ್ರಮಾಂಕ ಕುಸಿದರೂನೇಪಾಳದ ಟೇಲ್ ಎಂಡ್ ಬ್ಯಾಟರ್ಗಳು ಭಾರತದ ಬೌಲರ್ಗಳನ್ನು ಕಾಡಿದರು. 6ನೇ ವಿಕೆಟ್ ಆಗಿ ಬಂದ ಗುಲ್ಸನ್ ಝಾ ಭಾರತೀಯ ಬೌಲರ್ಗಳನ್ನು ಉತ್ತಮವಾಗಿ ಎದುರಿಸಿದರು. 3 ಬೌಂಡರಿಯಿಂದ 23 ರನ್ ಗಳಿಸಿ ಆಡುತ್ತಿದ್ದ ಗುಲ್ಸನ್ ಝಾ 35ನೇ ಬಾಲ್ ಎದುರಿಸುವಾಗ ಕ್ಯಾಚ್ ಕೊಟ್ಟು ಹೊರನಡೆದರು. 37.5 ಓವರ್ಗೆ ಮಳೆ ಅಡ್ಡಿ ಪಡಿಸಿದ ಕಾರಣ ಅರ್ಧ ಗಂಟೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು.
ಮಳೆ ಬಿಡುವು ಕೊಟ್ಟ ನಂತರ ಮೈದಾನಕ್ಕೆ ಬಂದ ಕೂಡಲೇ ಹಾರ್ದಿಕ್ ಪಾಂಡ್ಯ ದೀಪೇಂದ್ರ ಸಿಂಗ್ ಐರಿ (29) ಅವರ ವಿಕೆಟ್ ಪಡೆದರು. ಆದರೆ ಕೊನೆಯ ಓವರ್ಗಳಲ್ಲಿ ಸೋಂಪಾಲ್ ಕಾಮಿ ಭಾರತದ ಬೌಲರ್ಗಳನ್ನು ಕಾಡಿದರು. 48 ರನ್ ಗಳಿಸಿ ಔಟ್ ಆದ ಸೋಂಪಾಲ್ ಎರಡು ರನ್ನಿಂದ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಸಂದೀಪ್ ಲಮಿಚಾನೆ ಮತ್ತು ಲಲಿತ್ ರಾಜ್ಬನ್ಶಿ ವಿಕೆಟ್ ಕಳೆದುಕೊಂಡ ನೇಪಾಳ 48.2 ಓವರ್ಗೆ 230 ರನ್ ಗಳಿಸಿತು.