ಉಡುಪಿ: ವೆಂಕಟೇಶ್ವರ ಸ್ವೀಟ್ಸ್ ಮಾಲಕ ಪಿ. ಲಕ್ಷ್ಮೀನಾರಾಯಣ ರಾವ್ ಅವರ ಸಾರಥ್ಯದಲ್ಲಿ ಸತತ 13 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈ ಬಾರಿ ಸಾಸ್ತಾನದಿಂದ ತಿರುಪತಿವರೆಗೆ ಪಾದಯಾತ್ರೆ ನಡೆಯುತ್ತಿದ್ದು, ಆಗಸ್ಟ್ 22 ರಿಂದ ಆರಂಭಗೊಂಡು 18 ದಿನಗಳವರೆಗೆ ಪಾದಯಾತ್ರೆ ನಡೆಯುವುದು.
ಮೊದಲ ದಿನ ಹಿರಿಯಡಕ ನಾರಾಯಣಗುರು ಸಭಾಭವನದಲ್ಲಿ ತಂಗಿ, ಮುಂದೆ ಒಂದೊಂದು ದಿನ ಒಂದೊಂದು ಸ್ಥಳದಲ್ಲಿ ಉಳಿದು, ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಶ್ರೀನಿವಾಸ ಮಂಗಾಪುರ ದಿಂದ ತಿರುಪತಿ ತಲುಪಿ, ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲಾಗುವುದು.
ಈ ಪಾದಯಾತ್ರೆ ಯಲ್ಲಿ ಸರಿಸುಮಾರು 200 ಪಾದಯಾತ್ರಿಗಳು ಪಾಲುಪಡೆಯಲಿದ್ದು,ತಿರುಪತಿ ತಲುಪುವ ತನಕ 18 ದಿನದ ಎಲ್ಲಾ ಖರ್ಚು ಊಟ,ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ,ಉಳಿಯುವ ವ್ಯವಸ್ಥೆ,ವೆಂಕಟೇಶ್ವರ ಸ್ವೀಟ್ಸ್ ವತಿಯಿಂದಲೇ ಮಾಡಲಾಗುತ್ತಿದೆ. 200 ಪಾದಯಾತ್ರಿಗಳೂ ಲಕ್ಷ್ಮೀನಾರಾಯಣ ರಾವ್ ಅವರ ಮನೆಯಲ್ಲಿ ಬಟ್ಟೆಗಳನ್ನು ಸ್ವೀಕರಿಸಿ ಅಲ್ಲಿಂದ ಒಟ್ಟಿಗೆ ಹೊರಡಿದ್ದಾರೆ.












