ಸ್ಯಾನ್ ಫ್ರಾನ್ಸಿಸ್ಕೋ : ಚಾರ್ಲ್ಸ್ ಗೆಶ್ಕೆ ಅವರೊಂದಿಗೆ ಸೇರಿಕೊಂಡು ವಾರ್ನಾಕ್ 1982 ರಲ್ಲಿ ಅಡೋಬ್ ಅನ್ನು ಸಹ-ಸ್ಥಾಪಿಸಿದರು. ಇವರಿಬ್ಬರೂ ಅದಕ್ಕೂ ಮುನ್ನ ಜೆರಾಕ್ಸ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇವರು ಮೊದಲಿಗೆ ತಯಾರಿಸಿದ ಅಡೋಬ್ ಸ್ಕ್ರಿಪ್ಟ್ ಎಂಬ ಸಾಫ್ಟವೇರ್ ಡೆಸ್ಕ್ ಟಾಪ್ ಪಬ್ಲಿಶಿಂಗ್ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅದ್ಭುತ ತಂತ್ರಜ್ಞಾನವಾಗಿತ್ತು. ವಾರ್ನಾಕ್ 2000 ರವರೆಗೆ ಈ ಕಂಪನಿಯ ಸಿಇಒ ಆಗಿ ಸೇವೆ ಸಲ್ಲಿಸಿದರು ಮತ್ತು ಮಂಡಳಿಯ ಅಧ್ಯಕ್ಷರಾಗಿ ಮುಂದುವರೆದರು.
ಸಾಫ್ಟ್ ವೇರ್ ವಲಯದ ದಿಗ್ಗಜ ಕಂಪನಿ ಅಡೋಬ್ ಸಹ ಸಂಸ್ಥಾಪಕ ಜಾನ್ ವಾರ್ನಾಕ್ (82) ನಿಧನರಾಗಿದ್ದಾರೆ.ಆದರೆ, ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ. “ಇದು ಅಡೋಬ್ ಕುಟುಂಬ ಮತ್ತು ಉದ್ಯಮಕ್ಕೆ ದುಃಖದ ದಿನವಾಗಿದೆ. ದಶಕಗಳಿಂದ ಅವರು ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದರು” ಎಂದು ಅಡೋಬ್ ಸಿಇಒ ಶಂತನು ನಾರಾಯಣ್ ಹೇಳಿದ್ದಾರೆ.ಡೆಸ್ಕ್ಟಾಪ್ ಪಬ್ಲಿಶಿಂಗ್ನಲ್ಲಿ ಕ್ರಾಂತಿಯುಂಟು ಮಾಡಿದ ಅಡೋಬ್ ಕಂಪನಿಯ ಸಹ ಸಂಸ್ಥಾಪಕ ಜಾನ್ ವಾರ್ನಾಕ್ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅಂದಿನಿಂದ ಅವರು ನಿರ್ದೇಶಕ ಮಂಡಳಿಯ ಸದಸ್ಯರಾಗಿ ಉಳಿದರು. ಟೆಕ್ ಜಗತ್ತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ ವಾರ್ನಾಕ್ ಅವರಿಗೆ ಹಲವಾರು ಪ್ರತಿಷ್ಠಿತ ಗೌರವ ಸಮ್ಮಾನಗಳು ಸಂದಿವೆ. ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ ಅಂಡ್ ಇನ್ನೋವೇಶನ್, ಐಇಇಇ ಕಂಪ್ಯೂಟರ್ ಸೊಸೈಟಿಯಿಂದ ಕಂಪ್ಯೂಟರ್ ಉದ್ಯಮಿ ಪ್ರಶಸ್ತಿ, ಅಮೇರಿಕನ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಮೆಡಲ್ ಆಫ್ ಅಚೀವ್ಮೆಂಟ್ ಮತ್ತು ಮಾಹಿತಿ ವಿಜ್ಞಾನ ಮತ್ತು ಸಂವಹನಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಮಾರ್ಕೋನಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ.
“ಫೋಟೋಶಾಪ್ (ಅಡೋಬ್) ಸಂಸ್ಥಾಪಕ ಡಾ. ಜಾನ್ ವಾರ್ನಾಕ್ ನಿಧನರಾಗಿದ್ದಾರೆ. ಜಗತ್ತನ್ನು ಬದಲಾಯಿಸಿದ್ದಕ್ಕಾಗಿ ಡಾ. ಜಾನ್ ಅವರಿಗೆ ಧನ್ಯವಾದಗಳು. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.ಅಧಿಕೃತವಾಗಿ ಅಡೋಬ್ ಸಿಸ್ಟಮ್ಸ್ ಎಂದು ಕರೆಯಲ್ಪಡುವ ಅಡೋಬ್ ತನ್ನ ಮಲ್ಟಿಮೀಡಿಯಾ ಮತ್ತು ಸೃಜನಶೀಲ ಸಾಫ್ಟ್ವೇರ್ ಉತ್ಪನ್ನಗಳಿಗೆ ಹೆಸರುವಾಸಿಯಾದ ಅಮೇರಿಕನ್ ಸಾಫ್ಟ್ವೇರ್ ಕಂಪನಿಯಾಗಿದೆ. ಫೋಟೋಶಾಪ್, ಅಕ್ರೋಬ್ಯಾಟ್ ರೀಡರ್ ಮತ್ತು ಕ್ರಿಯೇಟಿವ್ ಕ್ಲೌಡ್ ಇದರ ಜನಪ್ರಿಯ ಉತ್ಪನ್ನಗಳಾಗಿವೆ. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯನ್ನು 1982 ರಲ್ಲಿ ಜಾನ್ ವಾರ್ನಾಕ್ ಮತ್ತು ಚಾರ್ಲ್ಸ್ ಗೆಶ್ಕೆ ಸ್ಥಾಪಿಸಿದರು.
ವಾರ್ನಾಕ್ ನಿಧನದ ಸುದ್ದಿಯ ನಂತರ ಟ್ವಿಟರ್ನಲ್ಲಿ ಅವರಿಗೆ ಶ್ರದ್ಧಾಂಜಲಿಗಳು ಹರಿದುಬರುತ್ತಿವೆ. “ಅಡೋಬ್ ಸಹ-ಸಂಸ್ಥಾಪಕ ಜಾನ್ ವಾರ್ನಾಕ್ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾದರು. ಅವರು ದೂರದೃಷ್ಟಿಯ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಪ್ರವರ್ತಕರಾಗಿದ್ದರು. ಡೆಸ್ಕ್ ಟಾಪ್ ಪಬ್ಲಿಶಿಂಗ್ನಲ್ಲಿ ಕ್ರಾಂತಿಯನ್ನುಂಟು ಮಾಡಿದ ಅವರು ಲಕ್ಷಾಂತರ ಜನರು ತಮ್ಮ ಸೃಜನಶೀಲತೆಯನ್ನು ಬಿಚ್ಚಿಡಲು ಸಹಾಯ ಮಾಡಿದರು. ಉದ್ಯಮಕ್ಕೆ ಅವರ ಪ್ರಭಾವ ಮತ್ತು ಕೊಡುಗೆಗಳನ್ನು ಸದಾ ಸ್ಮರಿಸಲಾಗುವುದು ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.