ಭಾರತ ಮಾತೆಯ ಹೆಮ್ಮೆಯ ಪುತ್ರ,ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಿವಾಸಿ ಪ್ರತಾಪ್ .ಇಡೀ ವಿಶ್ವದಲ್ಲೇ ಯಾರು ಕಂಡುಹಿಡಿಯದ ಒಂದು ವಿಶೇಷವಾದ ಡ್ರೋನ್ ಸೃಷ್ಟಿ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ . ಇತ್ತೀಚೆಗೆ ಜೀ ಕನ್ನಡದ ಡ್ರಾಮ ಜೂನಿಯರ್ ಕಾರ್ಯಕ್ರಮದಲ್ಲಿ ಪ್ರತಾಪ್ ಕರೆಸಲಾಗಿತ್ತು .ಆ ಸಂದರ್ಭದಲ್ಲಿ ಪ್ರತಾಪ್ ಅವರು ಪಟ್ಟ ಕಷ್ಟ ವನ್ನು ಎಲ್ಲರೊಂದಿಗೆ ಹಂಚಿಕೊಂಡರು . ಎಲ್ಲಿ ನೋಡಿದರು ಭ್ರಷ್ಟಾಚಾರ ನಡೆಯುವ ಈ ಕಲಿಯುಗದಲ್ಲಿ ದುಡ್ಡು ಮಾಡುವುದೇ ಒಂದು ದೊಡ್ಡ ಕೆಲಸ ಎಂಬಂತೆ ಇದ್ದಾರೆ.ಇವರೆಲ್ಲರ ನಡುವೆ ಡ್ರೋನ್ ಕಂಡುಹಿಡಿಯುವ ಮೂಲಕ ವಜ್ರದಂತೆ ಹೊಳೆಯುತ್ತಿದ್ದಾರೆ ನಮ್ಮ ಕನ್ನಡಿಗ ಪ್ರತಾಪ್.
International Robotics Exibhition ಜಪಾನ್ ನಲ್ಲಿ ನಡೆದ ಪ್ರದರ್ಶನದಲ್ಲಿ ಭಾರತಕ್ಕೆ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕ ತಂದುಕೊಟ್ಟ ನಮ್ಮ ಹೆಮ್ಮೆಯ ಕನ್ನಡಿಗ ಪ್ರತಾಪ್ .
ತಾಯಿಯ ಮಾಂಗಲ್ಯ ಅಡವಿಟ್ಟು ಈ ಸಾಧನೆ ಮಾಡಿದ್ದಾರೆ.ಮಗ ಏನಾದರೂ ಸಾಧಿಸಲಿ ಎಂದು ತಮ್ಮ ತಾಳಿಯನ್ನೆ ಕೊಟ್ಟ ಆ ತಾಯಿಗೆ ಕೋಟಿ ನಮನಗಳು.ಯೋಗ್ಯತೆ ಎಂಬುದು ಬಲವಂತವಾಗಿ ಪಡೆದುಕೊಳ್ಳುವುದಲ್ಲ ಅದು ತಾನಾಗಿಯೇ ಬರಬೇಕು ಎಂಬುದನ್ನು ತನ್ನ 22 ನೇ ವಯಸ್ಸಿಗೆ ಸಾಧನೆ ಮಾಡಿದ ಪ್ರತಾಪ್ ಅವರನ್ನು ನಾವು ನೋಡಿ ಕಲಿಯಬೇಕು.
ಪ್ರತಾಪ್ ಅವರು ಜಪಾನಿಗೆ ತೆರಳಲು ಸುತ್ತೂರು ಮಠದ ಸ್ವಾಮಿಗಳು ಸಹಾಯ ಮಾಡಿದ್ದರು ಎಂದು ಪ್ರತಾಪ್ ಬಹಳ ಹೆಮ್ಮೆಯಿಂದ ಹೇಳುತ್ತಾರೆ.ಜಪಾನಿನಲ್ಲಿ ನಿಂತು ಎಕ್ಸಿಬಿಷನ್ ಜಾಗಕ್ಕೆ ಹೋಗಲು ಹಣ ಕಡಿಮೆ ಇದ್ದಾಗ ಕಣ್ಣಲ್ಲಿ ನೀರು ಬಂದು ಬೇಡ ವಾಪಸ್ ಹೋಗೊಣ ಅಂದುಕೊಂಡೆ,ಆಗ ಕಣ್ಣಿನ ಮುಂದೆ ನನ್ನ ತಂದೆ ತಾಯಿ ಹಾಗೂ ಇಡಿ ದೇಶ ಕಣ್ಣ ಮುಂದೆ ಬಂತು.ಇಲ್ಲ ನಾನು ಸಾಧನೆ ಮಾಡಿಯೇ ಇಲ್ಲಿಂದ ಹೊಗೋದು ಅಂತ ಅಂದುಕೊಂಡು ಮುನ್ನೆಡೆದೆ ಎಂದು ಪ್ರತಾಪ್ ಹೇಳುತ್ತಾರೆ.
ನಾನು ಭಾರತಕ್ಕೆ ಬರಬೇಕಾದರೆ ಜಪಾನಿನ ಏರ್ಪೋರ್ಟ್ ನಲ್ಲಿ ನನ್ನ ಪೋಟೊ ಹಾಕಿದ್ದರು ಚಿನ್ನದ ಪದಕ ಗೆದ್ದ ಯುವಕ ಅಂತ ಅದನ್ನು ನೋಡಿ ಬಹಳ ಸಂತೋಷ ಆಯಿತ.ಬೆಂಗಳೂರಿಗೆ ಬಂದ ನಂತರ ಏರ್ಪೋರ್ಟ್ ನಲ್ಲಿ ತುಂಬಾ ಅಪೇಕ್ಷೆ ಹೊಂದಿದ್ದೆ ಯಾವ ಮೀಡಿಯಾ ಸಹ ನನ್ನ ಮುಂದೆ ನಿಂತಿರಲಿಲ್ಲ.ನಾನು ಮಾಡಿದ ಸಾಧನೆಗೆ ಬೆಲೆ ಸಿಕ್ಕಿಲ್ಲ ಎನ್ನುವ ನೋವು ಪ್ರತಾಪ್ ಅವರಿಗೆದೆ.
ಸುಮಾರು ಐದು ಸುತ್ತುಗಳ ಆ ಸ್ಪರ್ಧೆಯಲ್ಲಿ ಗೆದ್ದ ಈ ಯುವಕ ಟಾಪ್ ಒಂದರಲ್ಲಿ ಬರಬೇಕೆಂದರೆ ಸುಲಭದ ಮಾತಲ್ಲ.ಏನೇ ಆದರೂ ನಮ್ಮ ಕನ್ನಡಿಗ ಈ ಸಾಧನೆ ಮಾಡಿದ್ದಾರೆ ಎಲ್ಲರೂ ಬೆಂಬಲಿಸೋಣ.
ಈಗಲಾದರೂ ಸರ್ಕಾರ,ಕೇಂದ್ರ ಸರ್ಕಾರ ಪ್ರತಾಪ್ ಅವರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು.
ಈ ಲೇಖನ ಹಾಗೂ ಪ್ರತಾಪ್ ಅವರ ಸಾಧನೆ ನಿಮಗೆ ಇಷ್ಟವಾದರೆ ನಿಮ್ಮ ಫೇಸ್ಬುಕ್ , ವಾಟ್ಸಪ್ ಸ್ನೇಹಿತರಿಗೆ ಈ ಲೇಖನದ ಲಿಂಕ್ ತಪ್ಪದೇ ಶೇರ್ ಮಾಡಿ.