ಡಿ.೧೬ರಿಂದ ಕಟಪಾಡಿ ರಥೋತ್ಸವ

ಕಟಪಾಡಿ: ತೆಂಕಾರು ಮಾಗಣೆ ಕಟಪಾಡಿ ವೇಣುಗಿರಿ ಶ್ರೀಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿಯಲ್ಲಿ ಡಿ.೧೬ ರಂದು ಕಲಾ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ರಾತ್ರಿ ಉತ್ಸವ ಆರಂಭವಾಗಲಿದೆ, ಡಿ.೧೭ ರಂದು ಕಲಶಾಭಿಷೇಕ ಮಹಾಪೂಜೆ ಉತ್ಸವ ಮಹಾಜನ ಸಂತರ್ಪಣೆ, ಡಿ.೧೮ ರಂದು ಕವಾಟೋದ್ಘಾಟನೆ, ಮಹಾಪೂಜೆ, ತುಲಾಭಾರ ಸೇವೆ, ಅವಭೃತ ಉತ್ಸವ ಡಿ.೨೨ರಂದು ಶ್ರೀ ದೇವರಿಗೆ ರಂಗಪೂಜೆ, ಪರಿವಾರ ದೈವಗಳ ನೇಮೋತ್ಸವ ಡಿ.೨೩ರಂದು ಸಂಪ್ರೋಕ್ಷಣೆ ಕಾರ್ಯಕ್ರಮಗಳು ನಡೆಯಲಿದೆ.

ಇಡೀ ವಿಶ್ವದಲ್ಲೇ ಯಾರು ಕಂಡುಹಿಡಿಯದ ಒಂದು ವಿಶೇಷ ಡ್ರೋನ್ ;ನಮ್ಮ ಕನ್ನಡಿಗ ಪ್ರತಾಪ್‌ ಸಾಧನೆ

ಭಾರತ ಮಾತೆಯ ಹೆಮ್ಮೆಯ ಪುತ್ರ,ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಿವಾಸಿ ಪ್ರತಾಪ್ .ಇಡೀ ವಿಶ್ವದಲ್ಲೇ ಯಾರು ಕಂಡುಹಿಡಿಯದ ಒಂದು ವಿಶೇಷವಾದ ಡ್ರೋನ್ ಸೃಷ್ಟಿ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ . ಇತ್ತೀಚೆಗೆ  ಜೀ ಕನ್ನಡದ ಡ್ರಾಮ ಜೂನಿಯರ್ ಕಾರ್ಯಕ್ರಮದಲ್ಲಿ ಪ್ರತಾಪ್ ಕರೆಸಲಾಗಿತ್ತು .ಆ ಸಂದರ್ಭದಲ್ಲಿ ಪ್ರತಾಪ್ ಅವರು ಪಟ್ಟ ಕಷ್ಟ ವನ್ನು ಎಲ್ಲರೊಂದಿಗೆ ಹಂಚಿಕೊಂಡರು . ಎಲ್ಲಿ ನೋಡಿದರು ಭ್ರಷ್ಟಾಚಾರ ನಡೆಯುವ ಈ ಕಲಿಯುಗದಲ್ಲಿ ದುಡ್ಡು ಮಾಡುವುದೇ ಒಂದು ದೊಡ್ಡ ಕೆಲಸ ಎಂಬಂತೆ ಇದ್ದಾರೆ.ಇವರೆಲ್ಲರ ನಡುವೆ ಡ್ರೋನ್ ಕಂಡುಹಿಡಿಯುವ ಮೂಲಕ […]

ಪ್ರಥಮ್ ಕಾಮತ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಡುಪಿ: ಪೆಟ್ರೊಲಿಯಂ ಸಂರಕ್ಷಣಾ ಸಂಸ್ಥೆ, ‘ಸಕ್ಷಮ್’ ರಾಷ್ಟ್ರಿಯಮಟ್ಟದ  ಡ್ರಾಯಿಂಗ್ ಸ್ಪರ್ಧೆಯಲ್ಲಿ ಕಟಪಾಡಿಯ ಎಸ್.ವಿ.ಕೆ. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಕೆ.ಪ್ರಥಮ್ ಕಾಮತ್ ಅವರು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ ಡಿ.೨೬ ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಸುಜಾತ ನಾಗೇಶ್ ಕಾಮತ್ ಇವರ ಪುತ್ರ. ಉಡುಪಿಯ ದೃಶ್ಯ ಸ್ಕೂಲ್ ಆಫ್  ಆರ್ಟ್ಸ್ ನ ವಿದ್ಯಾರ್ಥಿ.ರಮೇಶ್ ರಾವ್ ಹಾಗೂ ಪ್ರಸಾದ್ ರಾವ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ದೈವದ ನುಡಿ: ಶಿವಪ್ರಕಾಶ್ ಕ್ಲಿಕ್ಕಿಸಿದ ಚಿತ್ರ

ಶಿವಪ್ರಕಾಶ್ ವೃತ್ತಿಪರ ಛಾಯಾಗ್ರಾಹಕರು. ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿ.ಅವರು ಕ್ಲಿಕ್ಕಿಸಿದ “ದೈವದ “ಚಿತ್ರ ಕರಾವಳಿಯ ಭೂತ ಕೋಲದ ವಿಶಿಷ್ಟತೆಯನ್ನು ಸಾರುತ್ತಿದೆ.