ಡಾನ್ 3 ಸಿನಿಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದೆ.ನಿರ್ದೇಶಕ ಫರ್ಹಾನ್ ಅಖ್ತರ್ ‘ಡಾನ್ 3’ ಸಿನಿಮಾ ಘೋಷಿಸಿದ್ದಾರೆ. ಆದ್ರೆ ಬಾಲಿವುಡ್ ಕಿಂಗ್ ಖಾನ್ ಅವ್ರ ಕಟ್ಟಾ ಅಭಿಮಾನಿಗಳ ಹೃದಯ ಛಿದ್ರಗೊಳಿಸಿದೆ. ಏಕೆಂದರೆ ಡಾನ್ 1 ಮತ್ತು ಡಾನ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಎಸ್ಆರ್ಕೆ ಡಾನ್ 3ರ ಭಾಗವಾಗುತ್ತಿಲ್ಲ. ರಾಕಿ ಔರ್ ರಾಣಿ ಕಿ ಪ್ರೇಮ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ರಣ್ವೀರ್ ಸಿಂಗ್ ಅವರನ್ನು ಬಾಲಿವುಡ್ನ ಮುಂದಿನ ಡಾನ್ ಆಗಿ ಸ್ವೀಕರಿಸಲಾಗಿದೆ.
ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದು ಕುಳಿತಿದ್ದರು.
ಅಂತಿಮವಾಗಿ ‘ಡಾನ್ 3’ ಘೋಷಣೆಯಾಗಿದ್ದು,
ಮುಂದಿನ ಡಾನ್ ರಣ್ವೀರ್ ಸಿಂಗ್…: ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಸಿನಿಮಾದಲ್ಲಿ ಅಭಿನಯಿಸುವ ನಟ ನಟಿಯರ ಬಗ್ಗೆ ಮಾಹಿತಿ ನೀಡಿಲ್ಲ. ಸದ್ಯ ಸಿನಿಮಾವನ್ನು ಘೋಷಿಸಿದ್ದಾರಷ್ಟೇ. ಆದ್ರೆ ಅವರ ಸೋಷಿಯಲ್ ಮಿಡಿಯಾ ಪೋಸ್ಟ್ ಪ್ರಕಾರ, ಸೂಪರ್ ಸ್ಟಾರ್ ಶಾರುಖ್ ಖಾನ್ ಡಾನ್ 3ರ ಭಾಗವಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿದೆ. ಇತ್ತ ನಟ ರಣ್ವೀರ್ ಸಿಂಗ್ ಅವರ ಕಾಸ್ಟಿಂಗ್ಗೂ ಅಂತಿಮ ಮುದ್ರೆ ಬಿದ್ದಿಲ್ಲ. ಆದ್ರೆ ಚಿತ್ರತಂಡದ ಮೂಲಗಳ ಪ್ರಕಾರ ನಟ ರಣ್ವೀರ್ ಸಿಂಗ್ ಅವರೇ ಮುಂದಿನ ಡಾನ್.ಇದಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆDON 3. ಬಿಟೌನ್ಲ್ಲಿ ಡಾನ್ ಸದ್ದಾಗುತ್ತಿದೆ. ಆಗಸ್ಟ್ 8ರಂದು ಬಾಲಿವುಡ್ನ ಸೆನ್ಸೇಶನಲ್ ಸುದ್ದಿ ಅಂದ್ರೆ ಅದು ‘ಡಾನ್ 3’. ನಟ, ನಿರ್ದೇಶಕ, ನಿರ್ಮಾಪಕ ಮತ್ತು ಬಹುಮುಖ ಪ್ರತಿಭೆ ಫರ್ಹಾನ್ ಅಖ್ತರ್ ಮಂಗಳವಾರ ‘ಡಾನ್ 3’ ಸಿನಿಮಾ ಘೋಷಣೆ ಮಾಡಿದ್ದಾರೆ.