ಮುನಿಯಾಲ್ ಆಯುರ್ವೇದ ಆಸ್ಪತ್ರೆ ವತಿಯಿಂದ ಮಹಿಳೆಯರ ಋತುಚಕ್ರದ ಸಮಸ್ಯೆಗಳ ಉಚಿತ ಚಿಕಿತ್ಸಾ ಶಿಬಿರ

ಮಣಿಪಾಲ: ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ಕಳೆದ ಇಪ್ಪತ್ತೈದು ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸಾವಿರಾರು ರೋಗಿಗಳಿಗೆ ಪ್ರಾಚೀನ ಆಯುರ್ವೇದ ಶಾಸ್ತ್ರಪದ್ದತಿಯಿಂದ ಸೇವೆ ಸಲ್ಲಿಸಿ ಆಶಾಕಿರಣವಾಗಿದೆ. ಇದೇ ನಿಟ್ಟಿನಲ್ಲಿ ತನ್ನ ರಜತ ಮಹೋತ್ಸವದ ಸಂಭ್ರಮದ ಅಂಗವಾಗಿ ಆಗಸ್ಟ್ 1 ರಿಂದ 7 ವರೆಗೆ ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ ಮಹಿಳೆಯರ ಋತುಚಕ್ರದ ಸಮಸ್ಯೆಗಳ ಚಿಕಿತ್ಸಾ ಶಿಬಿರ-“ಸೌಭಾಗ್ಯ ಕಲ್ಪ”ವನ್ನು ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ವತಿಯಿಂದ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಲಭ್ಯವಿದ್ದು. ಪಿ.ಸಿ.ಒ.ಡಿ (ಅಂಡಾಶಯ ಗ್ರಂಥಿ, ಅತಿಯಾದ ಮುಖದ ಕೂದಲು, ಹೆಚ್ಚಾದ ದೇಹದ ತೂಕ, ಮುಟ್ಟಿನ ದಿನದಲ್ಲಿ ವ್ಯತ್ಯಾಸ) ಬಂಜೆತನ, ಮುಟ್ಟಿನ ದಿನದಲ್ಲಿ ಅತಿಯಾದ ರಕ್ತಸ್ರಾವ, ಮುಟ್ಟಿನ ದಿನದಲ್ಲಿ ಹೊಟ್ಟೆನೋವು, ಬಿಳಿ ಸೆರಗು, ಗರ್ಭಾಶಯದ ಗಡ್ಡೆಯ ಸಮಸ್ಯೆ, ಸ್ತನದ ಸಮಸ್ಯೆ, ಮುಟ್ಟು ನಿಲ್ಲುವ ಸಮಯದಲ್ಲಿನ ತೊಂದರೆ,
ಗರ್ಭಾಶಯದ ಉರಿಯೂತ, ಯೋನಿಗೆ ಸಂಬಂಧಿಸಿದ ಉರಿ, ತುರಿಕೆ, ನೋವು ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಶಿಬಿರದ ಮಾಹಿತಿಗಾಗಿ 8123403233 ಸಂಪರ್ಕಿಸಿ.