ಕಟಪಾಡಿ: ಜು 29-30 ರಂದು ಎಸ್.ವಿ.ಎಸ್ ಹೈಸ್ಕೂಲ್ ನಲ್ಲಿ ಹಲಸು ಮೇಳ

ಕಟಪಾಡಿ: ಯುವ ಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಉಡುಪಿ ಇದರ ಸಹಯೋಗದೊಂದಿಗೆ ಜುಲೈ 29 ಮತ್ತು 30 ರಂದು ಕಟಪಾಡಿಯ ಎಸ್.ವಿ.ಎಸ್ ಹೈಸ್ಕೂಲ್ ನಲ್ಲಿ ಪ್ರಥಮ ಬಾರಿಗೆ 2 ದಿನದ ಹಲಸು ಮೇಳವನ್ನು ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಉಡುಪಿಯ ನಿರ್ದೇಶಕ ಹೇಮಂತ್ ಕುಮಾರ್, ಕಾಪು ಪೊಲೀಸ್ ಠಾಣಾ ಸಬ್ ಇನ್ ಸ್ಪೆಕ್ಟರ್ ಶೈಲ ಮುರಗೊಡ್, ಎಸ್. ವಿ.ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಸತ್ಯೇಂದ್ರ ಪೈ, ಎಸ್.ವಿ.ಎಸ್ ಕಾಲೇಜ್ ನ ಪ್ರಾಂಶುಪಾಲ ದಯಾನಂದ್ ಪೈ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಆಚಾರ್ಯ ಹಾಗೂ ಯುವಜನ ಸೇವಾ ಸಂಘದ ಅಧ್ಯಕ್ಷ ಪ್ರಮೋದ್ ಉಪಸ್ಥಿತರಿರಲಿದ್ದಾರೆ.