. ಐಬಿಪಿಎಸ್‌ ನೇಮಕಾತಿ; ಕ್ಲರ್ಕ್​ ಹುದ್ದೆಗಳಿಗೆಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಪಂಜಾಬ್​​ ಮತ್ತು ಸಿಂಧ್​ ಬ್ಯಾಂಕ್​ ಮತ್ತು ಬ್ಯಾಂಕ್​ ಆಫ್​ ಇಂಡಿಯಾ ಸೇರಿದಂತೆ ದೇಶದ ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಕ್ಲರ್ಕ್​ ಹುದ್ದೆಗಳ ನೇಮಕಾತಿಗೆ ಇನ್ಸ್​ಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್ (ಐಬಿಪಿಎಸ್‌) ಅರ್ಜಿ ಆಹ್ವಾನಿಸಿದೆ.
ಪ್ರತಿ ರಾಜ್ಯವಾರು ಹುದ್ದೆಗಳ ಹಂಚಿಕೆ ಮಾಡಿದ್ದು, ಇದರನುಸಾರ ಕರ್ನಾಟಕಕ್ಕೆ 88 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಬ್ಯಾಂಕಿಂಗ್​ ವಲಯದಲ್ಲಿ ಕಾರ್ಯನಿರ್ವಹಿಸುವ ಇಚ್ಛೆ ಹೊಂದಿರುವ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಐಬಿಪಿಎಸ್‌ ಪ್ರತಿ ರಾಜ್ಯವಾರು ಹುದ್ದೆಗಳನ್ನು ಹಂಚಿಕೆ ಮಾಡಿದ್ದು, ಇದರನುಸಾರ ಕರ್ನಾಟಕಕ್ಕೆ 88 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಆಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ: ದೇಶದ ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಒಟ್ಟು 4,045 ಕ್ಲರ್ಕ್​ ಹುದ್ದೆಗಳಿಗೆ ದೇಶಾದ್ಯಂತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಪ್ರಮುಖವಾಗಿ ನಾಲ್ಕು ಬ್ಯಾಂಕ್​ಗಳಲ್ಲಿ 88 ಹುದ್ದೆಗಳ ನೇಮಕಾತಿ ನಡೆಯಲಿದೆ. ಬ್ಯಾಂಕ್​ ಆಫ್​ ಇಂಡಿಯಾಗೆ 3, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾಗೆ 61, ಪಂಜಾಬ್​ ಮತ್ತು ಸಿಂಧ್​​ ಬ್ಯಾಂಕ್​ನಲ್ಲಿ 9 ಹಾಗೂ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿ 15 ಹುದ್ದೆಗಳಿವೆ.

ಆಯ್ಕೆ ವಿಧಾನ ಹೇಗೆ?: ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತ ಪ್ರಿಲಿಮನರಿ ಪರೀಕ್ಷೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಮತ್ತು ಅಂತಿಮವಾಗಿ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪ.ಜಾ, ಪ.ಪಂ ಮತ್ತು ವಿಶೇಷಚೇತನ, ನಿವೃತ್ತ ಸೇವಾಧಿಕಾರಿಗಳಿಗೆ 175 ರೂ ಅರ್ಜಿ ಶುಲ್ಕ ಮತ್ತು ಇತರೆ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ಪಾವತಿಸಬೇಕು.

ದಿನಾಂಕ ವಿಸ್ತರಣೆ ಅಧಿಸೂಚನೆ
ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 20 ವರ್ಷ ಪೂರ್ಣಗೊಳಿಸಿದ್ದು, ಗರಿಷ್ಠ 28 ವರ್ಷ ಆಗಿರಬೇಕು. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

. ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಅಭ್ಯರ್ಥಿಗಳು ibps.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಯನ್ನು https://ibpsonline.ibps.in/crpcl13jun23/ ಜಾಲತಾಣದಿಂದ ಪಡೆಯಬಹುದು.
ಅರ್ಜಿ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸರಿಯಾಗಿ ಪರಿಶೀಲಿಸಿ ಮುಂದುವರೆಯಬೇಕು. ಅರ್ಜಿ ಸಲ್ಲಿಕೆ ಜುಲೈ 1ರಿಂದ ಆರಂಭವಾಗಿದ್ದು, ಜುಲೈ 21 ಕಡೆಯ ದಿನ. ಆದರೆ, ಈ ದಿನವನ್ನು ಜುಲೈ 28ರವರೆಗೆ ವಿಸ್ತರಿಸಲಾಗಿದೆ