ಜನಪ್ರಿಯ ಮಾಧ್ಯಮ ಟ್ವಿಟರ್​ ಲೋಗೋ ಬದಲಾವಣೆ

ಲಂಡನ್: ಜಗತ್ತಿನ ನಂಬರ್​ 1 ಧನಿಕ ಎಲಾನ್​ ಮಸ್ಕ್​ ಒಡೆತನದ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್​ ತನ್ನ ಲೋಗೊ ಮತ್ತು ಹೆಸರನ್ನು ಬದಲಿಸಿಕೊಂಡಿದೆ. ನೀಲಿ ಹಕ್ಕಿ ಜಾಗದಲ್ಲೀಗ ಕಪ್ಪು ಬಿಳಿಯ X ಎಂಬ ವಿನ್ಯಾಸ ಕಾಣಿಸಿಕೊಂಡಿದೆ. ಜನಪ್ರಿಯ ಮಾಧ್ಯಮ ಟ್ವಿಟರ್​ ಲೋಗೋ ಬದಲಾಗಿದೆ. ಮಾಲೀಕ ಎಲಾನ್​ ಮಸ್ಕ್​ ಹೊಸ ಲೋಗೋವನ್ನು ಅನಾವಣ ಮಾಡಿದರು.

ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದಲ್ಲಿನ ಟ್ವಿಟರ್​ನ ಕೇಂದ್ರ ಕಚೇರಿಯಲ್ಲಿ ಮಾಲೀಕ ಎಲಾನ್​ ಮಸ್ಕ್​ X ಹೊಸ ಲೋಗೋವನ್ನು ಸೋಮವಾರ ಬಿಡುಗಡೆ ಮಾಡಿದರು. ಇದು ಸದ್ಯ ಕಂಪ್ಯೂಟರ್​ಗಳ ಡೆಸ್ಟ್​ಟಾಪ್​ಗಳಲ್ಲಿ ಮಾತ್ರ ಕಾಣ ಸಿಗುತ್ತಿದೆ. ಮೊಬೈಲ್​ ಆವೃತ್ತಿಯಲ್ಲಿ ಸದ್ಯಕ್ಕೆ ಬದಲಾವಣೆ ಮಾಡಲಾಗಿಲ್ಲ.ನ್ನು ಮುಂದೆ ಟ್ವಿಟರ್​ ಕಂಪನಿ ಬದಲಾಗಿ X.COM ಸ್ಟಾರ್ಟ್​ಅಪ್​ನಡಿ ಕೆಲಸ ಮಾಡಲಿದೆ ಎಂದು ತಿಳಿದು ಬಂದಿದೆ.