ಸ್ವರ್ಣಾ ನದಿಯಲ್ಲಿ ತೀವ್ರ ಪ್ರವಾಹದ ಸಾಧ್ಯತೆ: ತೀರ ಪ್ರದೇಶಗಳಲ್ಲಿರುವವರಿಗೆ ಎಚ್ಚರಿಕೆ
ಉಡುಪಿ: ಕಳೆದ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸ್ವರ್ಣ ನದಿಯು ಉಕ್ಕಿ ಹರಿಯುತ್ತಿದ್ದು, ತೀವ್ರ ಪ್ರವಾಹದ ಸಾಧ್ಯತೆಗಳು ಕಂಡುಬರುತ್ತಿದೆ. ನದೀ ತೀರಕ್ಕೆ ಹೋಗುವವರು ಹಾಗೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸುವುದು ಒಳಿತು.