ಕಾಲು ಗಂಟಿನ ಮೂಳೆ ಬದಲಾವಣೆ (KNEE JOINT REPLACEMENT SURGERY) ತಡೆಯಲು ಹಾಗೂ ಗಂಟು ನೋವಿಗೆ ಆಯುರ್ವೇದ ಚಿಕಿತ್ಸೆ: ಡಾ. ಎಂ. ವಿ. ಉರಾಳ್

ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ. ದೇಹದ ವಿವಿಧ ಸಂಧಿಗಳಲ್ಲಿ ಹಿಂಸೆ ನೀಡುವಷ್ಟು ನೋವನ್ನು ಕೊಡುವ ಸಂಧಿವಾತ ಆರಂಭವಾದರೆ ಕುಳಿತರೆ ಏಳಲಾಗದು, ಎದ್ದರೆ ಕುಳಿತುಕೊಳ್ಳಲಾಗದು ಎನ್ನುವ ಸ್ಥಿತಿಯನ್ನು ತರುತ್ತದೆ.

ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುವ ಸಂಧಿವಾತ ದೇಹದ ಯಾವ ಕೀಲುಗಳು ಸೇರುವ ಜಾಗದಲ್ಲಿ ಬೇಕಾದರೂ ಆರಂಭವಾಗಬಹುದು. ಹೆಚ್ಚಾಗಿ ಕಾಲಿನ ಮಂಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಸಂಧಿವಾತದ ಲಕ್ಷಣ ಮತ್ತು ಕಾರಣಗಳು

ಸಾಮಾನ್ಯವಾಗಿ ಸಂಧಿವಾತ 40 ವರ್ಷದ ಬಳಿಕ ಕಾಣಿಸಿಕೊಳ್ಳುತ್ತದೆ. ಸಂಧಿಗಳಲ್ಲಿ ಅಂದರೆ ಭಾರವನ್ನು ಹೊರುವ ಭಾಗಗಳಲ್ಲಿ ವಿಪರೀತ ನೋವು ಉಂಟಾಗುತ್ತದೆ. ದೇಹದ ತೂಕ ಹೆಚ್ಚಿದ್ದರೆ ಈ ಸಂಧಿವಾತ ಕಾಣಿಸಿಕೊಳ್ಳುತ್ತದೆ. ನೋವಿನ ಜಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇನ್ನು ಸಂಧಿವಾತದಿಂದ ದೇಹ ಬಳಲುತ್ತಿರುವ ಸಂದರ್ಭದಲ್ಲಿ 2 ಮೂಳೆಗಳ ಮಧ್ಯದಲ್ಲಿ ಕಾರ್ಟಿಲೇಜ್‌ಗಳಿರುತ್ತವೆ. ಇವು ಕುಶನ್‌ ರೀತಿಯಲ್ಲಿ ಮೃದುವಾಗಿರುತ್ತವೆ. ಸಂಧಿವಾತದಲ್ಲಿ ಈ ಕಾರ್ಟಿಲೇಜ್‌ಗಳು ಸವೆಯಲು ಆರಂಭವಾಗುತ್ತವೆ. ಮೂಳೆಗಳಲ್ಲಿ ಕ್ಯಾಲ್ಸಿಯಂ ಮಟ್ಟ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದ ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಮಹಿಳೆಯರಲ್ಲಿ ಬದಲಾಗುವ ಹಾರ್ಮೋನುಗಳಿಂದ ಸಂಧಿವಾತ ಕಾಣಿಸಿಕೊಳ್ಳುತ್ತದೆ. ಇನ್ನು ಗರ್ಭಾವಸ್ಥೆಯ ಹಂತದಲ್ಲಿ ದೇಹದ ತೂಕ ಹೆಚ್ಚಾಗಿ, ಕಡಿಮೆಯಾಗುತ್ತದೆ. ಆಗ ಶರೀರದಲ್ಲಿನ ಬದಲಾವಣೆಗಳಿಂದ ಸಂಧಿವಾತದ ಸಮಸ್ಯೆ ಕಾಡುತ್ತದೆ.

ಸಂಧಿವಾತದ ಸಮಸ್ಯೆ ಪರಿಹಾರವೇನು?

ಸಂಧಿವಾತ ತಡೆಗೆ ಕ್ಯಾಲ್ಸಿಯಂ ಅಂಶಗಳ ಆಹಾರವನ್ನು ಹೆಚ್ಚು ಸೇವನೆ ಮಾಡಬೇಕು. ಅದರಲ್ಲೂ ಮಹಿಳೆಯರು ಕ್ಯಾಲ್ಸಿಯಂ ಭರಿತ ಆಹಾರ ಸೇವನೆ ಮಾಡಬೇಕು. ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಸಂಧಿವಾತ ತಡೆಗೆ ಇರುವ ಉತ್ತಮ ಪರಿಹಾರವಾಗಿದೆ.

ಕಾಲು ಗಂಟಿನ ಬದಲಾವಣೆಗೆ ಕಾರಣಗಳು:
ರೂಮ್ಯಾಟಿಕ್ ಅರ್ಥ್ರೈಟಿಸ್ ಗೌಟ್
ಮೂಳೆ ಗಳಿಗೆ ರಕ್ತ ಹರಿಸುವ ರಕ್ತ ನಾಳದ ತೊಂದರೆಯಿಂದ ಕಾಲಿನ ಗಂಟಿನಲ್ಲಿ ಮೃದ್ವಸ್ಥಿ ಸವೆದು ಹೋದಲ್ಲಿ

ಮೂಳೆ ಸವೆತದ ಲಕ್ಷಣಗಳು

ಯಾವಾಗಲೂ ಗಂಟು ನೋವು ಇರುವಿಕೆ
ನಡೆಯುವಾಗ ಗಂಟಿನಲ್ಲಿ ಶಬ್ದವಾಗುವಿಕೆ
ಗಂಟು ಊದಿ ಕೊಳ್ಳುವಿಕೆ
ಗಂಟು ಬಿಗಿತವಾಗಿರುವಿಕೆ
ಕಾಲಿನ ಗಂಟು ತನ್ನ ಆಕಾರವನ್ನು ಕಳೆದುಕೊಂಡು ಒಳಕ್ಕೆ ಅಥವಾ ಹೊರಕ್ಕೆ ಬಾಗಿಕೊಳ್ಳುವುದು

ಇದನ್ನೆಲ್ಲಾ ಮನಗೊಂಡು ಕಾಲು ಗಂಟಿನ ಬದಲಾವಣೆ ಹಾಗೂ ಗಂಟು ನೋವಿಗೆ ಶಾಶ್ವತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ JOINT CARE ಎನ್ನುವ ಆಯುರ್ವೇದ ಔಷಧಿಯನ್ನು ಆವಿಷ್ಕಾರಮಾಡಿ ನೂರಾರು ರೋಗಿಗಳ ಕಾಲು ನೋವನ್ನು ಕಡಿಮೆ ಮಾಡಿ ಕಾಲು ಗಂಟಿನ ಬದಲಾವಣೆ ಯಾ ಆಪರೇಷನ್ ಮಾಡುವುದನ್ನು ತಡೆಗಟ್ಟಲಾಗಿದೆ. ಈ ಔಷಧ ಮೂಳೆಗಳಲ್ಲಿ ರಕ್ತ ಸಂಚಾರ ಹೆಚ್ಚಿಸಿ ಮೃದ್ವಸ್ಥಿಯ ಬೆಳವಣಿಗೆಯಾಗುವಂತೆ ಮಾಡಿ ಸೈನೋವಿಯಲ್ ದ್ರವವನ್ನು ಮರು ಉತ್ಪತ್ತಿ ಮಾಡಿ ಮೂಳೆ ಸವಕಳಿಯನ್ನು ತಡೆದು ಗಂಟಿನಲ್ಲಿ ನಡೆದಾಡವಾಗ ಬರುವ ಶಬ್ದ, ಉರಿ, ನೋವನ್ನು ಕಡಿಮೆಯಾಗಿ ನೋವಿಲ್ಲದ ಜೀವನವನ್ನು ನಡೆಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ: 73488 61042 /8982082089, uralsayurveda.in ಸಂಪರ್ಕಿಸಿ