ಮೂಡುಶೆಡ್ಡೆ: ಈಜುಕೊಳದಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಮಂಗಳೂರು: ಮೂಡುಶೆಡ್ಡೆ ಸಮೀಪದ ರೆಸಾರ್ಟ್‌ನ ಈಜುಕೊಳ್ಳದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವ ಬಿದ್ದು ಮೃತಪಟ್ಟಿರುವ ಘಟನೆ ಜೂ. 29ರಂದು ಸಂಭವಿಸಿದೆ.
ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಎಲ್ಡನ್‌ಪರೀಶ್ (21) ಮೃತ ವಿದ್ಯಾರ್ಥಿ.
ಸಂಜೆ ರೆಸಾರ್ಟ್‌ನ ಈಜುಕೊಳದಲ್ಲಿ ಜಲಕ್ರೀಡೆಯಲ್ಲಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.