ಮೂಡಬಿದಿರೆ: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ 3 ದಿನಗಳ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ

ಮೂಡಬಿದ್ರೆ, ಜೂ. 28: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಚಿಕಿತ್ಸೆ, ಸಲಹೆ ನೀಡುವ ಮೂರು ದಿನಗಳ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಆಳ್ವಾಸ್ ಹೆಲ್ತ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿನಯ್ ಆಳ್ವ ಉದ್ಘಾಟಿಸಿ ಮಾತನಾಡಿ, ದಿವ್ಯಾಂಗರ ಬದುಕಿಗೆ ಈ ಶಿಬಿರವು ಆಶಾಕಿರಣವಾಗಲಿ ಎಂದು ಶುಭ ಹಾರೈಸಿ, ಇಂತಹ ಶಿಬಿರಕ್ಕೆ ಮುಂದೆಯೂ ಸಹಕಾರ ನೀಡುವುದಾಗಿ ಅಭಿಪ್ರಾಯ   ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸೇವಾಭಾರತಿಯ ಅಧ್ಯಕ್ಷರಾದ  ಕೆ. ವಿನಾಯಕ ರಾವ್ ಅವರು‌ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡಿ, ಬೆನ್ನುಹುರಿ ಅಪಘಾತದ ನಂತರದ ಸಮಸ್ಯೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿ, ಮೂರು ದಿನಗಳ ಶಿಬಿರಕ್ಕೆ ಆಳ್ವಾಸ್ ಆಡಳಿತದ ಸಹಕಾರವನ್ನು ಶ್ಲಾಘಿಸಿದರು.
ಆಳ್ವಾಸ್ ಹೆಲ್ತ್ ಸೆಂಟರ್ ನ  ಡಾ.ಹರೀಶ್ ನಾಯಕ್, ಮೂಡಬಿದ್ರೆ ರೋಟರಿ ಕ್ಲಬ್ ನ  ನಿಯೋಜಿತ ಅಧ್ಯಕ್ಷರಾದ ಸಿ.ಎಚ್ ಗಫೂರ್, ಆಳ್ವಾಸ್ ಹೆಲ್ತ್ ಸೆಂಟರ್ ನ ಡಾ. ಸದಾನಂದ ನಾಯಕ್, ಮಾತೃಭೂಮಿ ಸಹಕಾರ ಸಂಘ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕೊಂಪದು, MCS ಬ್ಯಾಂಕ್ ನ ಶಾಖಾ ಪ್ರಬಂಧಕ ಚಂದ್ರಶೇಖರ್, ಆಳ್ವಾಸ್ ಹೆಲ್ತ್ ಸೆಂಟರ್ ನ  ಆಡಳಿತ ಅಧಿಕಾರಿ ಭಾಸ್ಕರ್, ಆಳ್ವಾಸ್ ಹೆಲ್ತ್ ಸೆಂಟರ್ ನ ಡಾ. ಹನಾ ಶೆಟ್ಟಿ, APD ಸಂಸ್ಥೆ, ಬೆಂಗಳೂರಿನ ಫಿಸಿಯೋಥೆರಪಿಸ್ಟ್  ಪಾಲಯ್ಯ ಉಪಸ್ಥಿತರಿದ್ದರು.
ಸೇವಾಭಾರತಿ ಬೆಳ್ತಂಗಡಿ ಹಾಗೂ ಸೇವಾಧಾಮ ನೇತೃತ್ವದಲ್ಲಿ, ಆಳ್ವಾಸ್ ಹೆಲ್ತ್ ಸೆಂಟರ್ ಸಹಕಾರದೊಂದಿಗೆ, MCS ಬ್ಯಾಂಕ್ ಮೂಡಬಿದ್ರೆ, APD ಸಂಸ್ಥೆ ಬೆಂಗಳೂರು, ಮಾತೃಭೂಮಿ ಸಹಕಾರ ಸಂಘ ಮಂಗಳೂರು ಇದರ ಸಹಭಾಗಿತ್ವದಲ್ಲಿ ಶಿಬಿರ ಆಯೋಜಿಸಲಾಗಿದೆ.
ಸೇವಾಧಾಮದ ಕಾರ್ಯಕ್ರಮ ಸಂಯೋಜಕಿ ಉಷಾ. ಬಿ  ಸ್ವಾಗತಿಸಿ, ನಿರ್ವಹಿಸಿದರು. ಸೇವಾಧಾಮದ ಪ್ರಬಂಧಕ ಬಾಲಕೃಷ್ಣ ವಂದಿಸಿದರು.