ಕಟಪಾಡಿ: ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಸೇತುಬಂಧ ಕಾರ್ಯಾಗಾರವು ಜೂನ್ 16 ಜೂನ್ ರಿಂದ ಜೂನ್ 21ರ ವರೆಗೆ ಜರುಗಿತು.
ಮೊದಲನೆಯ ದಿನ ಕಾಲೇಜಿನ ಪ್ರಾಂಶುಪಾಲ ಡಾ। ಅನಂತ್ ಪೈ , ಮಕ್ಕಳಿಗೆ ಸಂಸ್ಕೃತಿ ಹಾಗೂ ಕಾಲೇಜು ನಿಯಮದ ಬಗ್ಗೆ ತಿಳಿಸಿದರು. ತ್ರಿಶಾ ಸಂಸ್ಥೆಯ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜಯದೀಪ್ ಸಂವಹನಗಳ ಬಗ್ಗೆ ಚಟಿವಟಿಕೆಗಳನ್ನು ನಡೆಸಿಕೊಟ್ಟರು.
ಎರಡನೆಯ ದಿನ “ಇಂಪಾಸಿಬಲ್ ಟು ಪಾಸಿಬಲ್” – ಅಸಾಧ್ಯದಿಂದ ಸಾಧ್ಯದೆಡೆಗೆ ಎನ್ನುವ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಾದ ಜೈ ಕಿಶನ್ ಭಟ್ ನಡೆಸಿಕೊಟ್ಟರು.
ಮೂರನೆಯ ದಿನ ಪಠ್ಯಕ್ರಮದ ವಿಷಯಗಳ ಬಗ್ಗೆ ಸೇತು-ಬಂಧ ಕಾರ್ಯಾಗಾರ ನಡೆಯಿತು. ವಾಣಿಜ್ಯ ವಿಷಯದ ಕುರಿತು ಜಯದೀಪ್, ಮೂಲಗಣಿತವನ್ನು ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಹಣ ಮತ್ತು ಹೂಡಿಕೆಯ ಕುರಿತಾಗಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್ ರಾವ್ ತಿಳಿಸಿಕೊಟ್ಟರು. ನಂತರ ತ್ರಿಶಾ ಕಾಲೇಜಿನ ಕನ್ನಡ ಪ್ರಾಧ್ಯಪಕ ಧೀರಜ್ ಬೆಳ್ಳಾರೆ ಜೀವನ ಮೌಲ್ಯ ಚಟುವಟಿಕೆಗಳನ್ನು ನಡೆಸಿದರು.
ನಾಲ್ಕನೆಯ ದಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ, ರಾಸಾಯನಶಾಸ್ತ್ರ , ಭೌತಶಾಸ್ತ್ರ ಮತ್ತು ಗಣಕಯಂತ್ರದ ತರಬೇತಿ ನೀಡಲಾಯಿತು. ನಂತರ ರಾಷ್ಟ್ರಮಟ್ಟದ ಜೆ.ಸಿ.ಐ ತರಬೇತುದಾರರಾದ ಡಾ. ರಾಜೇಂದ್ರ ಭಟ್.ಕೆ ‘ಡಿಫರೆಂಟ್ ಲೆವೆಲ್ಸ್ ಆಫ್ ಸಕ್ಸಸ್’ಎನ್ನುವ ವಿಷಯ ಮೇಲೆ ತಮ್ಮ ಜೀವನದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಐದನೆಯ ದಿನ ಸಿ.ಎ ಗಿರಿಧರ್ ಕಾಮತ್ ಇವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಹಲವಾರು ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಸ್ಫೂರ್ತಿ ತುಂಬಿ ಸೇತು-ಬಂಧ ಕಾರ್ಯಾಗಾರವನ್ನು ಪೂರ್ತಿಗೊಳಿಸಿದರು.