ಪ್ಯಾರಾಲಿಂಪಿಕ್ ವಾಲಿಬಾಲ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುವಿಗೆ ಬೇಕಾಗಿದೆ ದಾನಿಗಳ ನೆರವು

ದಾವಣಗೆರೆ: ಇಲ್ಲಿನ ಹರಿಹರ ನಿವಾಸಿ ರೂಪಾ ಎನ್ ಪ್ಯಾರಾಲಿಂಪಿಕ್ ವಾಲಿಬಾಲ್ ಕ್ರೀಡಾಪಟುವಾಗಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಜುಲೈ 3 ರಿಂದ 8 ಕಝಾಕಿಸ್ತಾನ್ ನ ಅಲ್ಮಾಟಿಯಲ್ಲಿ ನಡೆಯಲಿರುವ ವಿಶ್ವ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಏಷ್ಯನ್ ವಲಯ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಪ್ಯಾರಾಲಿಂಪಿಯನ್‌ಗೆ ಆರ್ಥಿಕ ಸಹಾಯದ ಅಗತ್ಯವಿದೆ.

ರೂಪಾ ಅವರ ಕಝಾಕಿಸ್ತಾನ್ ಪ್ರವಾಸದ ಖರ್ಚಿಗೆ ಪ್ಯಾರಾಲಿಂಪಿಕ್ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಹಣ ನೀಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಪ್ರಾಯೋಜಕರು ಮತ್ತು ದಾನಿಗಳಿಗಾಗಿ ಅವರು ಎದುರು ನೋಡುತ್ತಿದ್ದಾರೆ. ಚಾಂಪಿಯನ್ ಶಿಪ್ ನ ಒಟ್ಟು ವೆಚ್ಚ ಸುಮಾರು 3 ಲಕ್ಷ ರೂ ಎಂದು ಅಂದಾಜಿಸಲಾಗಿದ್ದು, ಇಲ್ಲಿಯವರೆಗೆ ಕೇವಲ 50 ಸಾವಿರ ರೂ ಹೊಂದಿಸಲು ಸಾಧ್ಯವಾಗಿದೆ.

ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿರುವ ರೂಪಾ ಅವರಿಗೆ ದಾನಿಗಳ ನೆರವಿನ ಅಗತ್ಯವಿದ್ದು, ಆರ್ಥಿಕ ನೆರವು ನೀಡಲಿಚ್ಛಿಸುವ ದಾನಿಗಳು ಅವರ ಖಾತೆಗೆ ಹಣ ವರ್ಗಾಯಿಸಬಹುದು.

ರೂಪ ಎನ್
ಖಾತೆ ಸಂಖ್ಯೆ: 31594501306
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ: ಪಿಬಿ ರಸ್ತೆ ಹರಿಹರ
IFSC: SBIN0040111
ಜಿ ಪೇ/ ಫೋನ್‌ಪೇ ಸಂಖ್ಯೆ: 9538669086