ಕ್ಯಾಬಿನ್​ ಕ್ರೂ ಹುದ್ದೆಗೆ ನಾಳೆ ಬೆಂಗಳೂರಿನಲ್ಲೇ ನಡೆಯಲಿದೆ ವಾಕ್​-ಇನ್​- ಇಂಟರ್​ವ್ಯೂ

ಪಿಯುಸಿ ಆದಾಕ್ಷಣ ಉದ್ಯೋಗದ ದಾರಿ ಹುಡುಕುತ್ತಿರುವ ಯುವತಿಯರಿಗೆ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಭರ್ಜರಿ ಅವಕಾಶ ನೀಡಿದೆ.
ಏರ್​ ಇಂಡಿಯಾದ ಸಂಸ್ಥೆಯಲ್ಲಿ (Air India Limited) ಖಾಲಿ ಇರುವ ಕ್ಯಾಬಿನ್​ ಕ್ರೂ ಹುದ್ದೆ ಭರ್ತಿಗೆ ಸಂಸ್ಥೆ ಅಧಿಸೂಚನೆ ಪ್ರಕಟಿಸಿದೆ.ಭಾರತದಲ್ಲಿ ಅತಿ ಹೆಚ್ಚಿನ ವೇತನ ಹೊಂದಿರುವ ಹುದ್ದೆಗಳಲ್ಲಿ ಒಂದಾಗಿರುವ ಕ್ಯಾಬಿನ್​ ಕ್ರೂ ಹುದ್ದೆ ನೇಮಕಾತಿ ಇದಾಗಿದೆ

ವಾಕ್​ ಇನ್​ ಮೂಲಕ ಈ ಹುದ್ದೆ ಆಯ್ಕೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳು ಹಾಜರಾಗಬಹುದು. ಈ ಹುದ್ದೆಗಳು ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದೆ.
ಈ ಹುದ್ದೆ ಅನೇಕ ಯುವತಿಯರ ಕನಸಾಗಿದ್ದು, ಅದಕ್ಕೆ ಇದೀಗ ವೇದಿಕೆ ಸಿಕ್ಕಿದೆ. ಅತ್ಯುತ್ತಮ ಸಂಬಳ ಹೊಂದಿರುವ ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

ಭಾರತದಲ್ಲಿ ಅತಿ ಹೆಚ್ಚಿನ ವೇತನ ಹೊಂದಿರುವ ಹುದ್ದೆಗಳಲ್ಲಿ ಒಂದಾಗಿರುವ ಕ್ಯಾಬಿನ್​ ಕ್ರೂ ಹುದ್ದೆ ನೇಮಕಾತಿ ಇದಾಗಿದೆ. ಆಗಸದಲ್ಲಿ ಹಾರುವ ಜೊತೆಗೆ ವಿವಿಧ ರಾಜ್ಯ, ದೇಶದ ಅತಿಥಿಗಳೊಂದಿಗೆ ಉತ್ತಮ ಸಂಭಾಷಣೆ, ಅತಿಥ್ಯವನ್ನು ಬೇಡುವ ಹುದ್ದೆ ಇದಾಗಿದೆ.

ಹುದ್ದೆ ವಿವರ: ವಿಮಾನದ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತಾ ಸೇವೆ ಒದಗಿಸುವುದು ಕ್ಯಾಬಿನ್​ ಕ್ರೂ ಹುದ್ದೆಯಾಗಿದೆ. ನಿಗದಿತ ಹುದ್ದೆಗಳ ಸಂಖ್ಯೆಯನ್ನು ಸ್ಪಷ್ಟಪಡಿಸಿಲ್ಲ.
ಜೂನ್​ 22 ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12:30ರವರೆಗೆ ಈ ನೇರ ಸಂದರ್ಶನ ನಡೆಯಲಿದೆ. ಈ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳ ಸಾಮರ್ಥ್ಯದ ಮೂಲಕ ಆಯ್ಕೆ ನಡೆಸಲಾಗುವುದು.

ಪಿಯುಸಿಯಲ್ಲಿ ಕನಿಷ್ಠ 50 ಅಂಕ ಪಡೆದ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿದ್ದಾರೆ.
ಯುವತಿಯರ ಎತ್ತರ 155 ಸೆಂ.ಮೀ ಇರಬೇಕು.
18 ರಿಂದ 27 ವರ್ಷದ ಯುವತಿಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಯುವತಿಯರು ಇಂಗ್ಲಿಷ್​ ಮತ್ತು ಹಿಂದಿ ಭಾಷೆಯಲ್ಲಿ ಉತ್ತಮ ಹಿಡಿತವನ್ನು ಹೊಂದಿರಬೇಕು.
ಭಾರತೀಯ ಪ್ರಜೆಯಾಗಿದ್ದು, ಭಾರತೀಯ ಪಾಸ್​ಪೋರ್ಟ್​, ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​​ ಹೊಂದಿರಬೇಕು
ಎಲ್ಲಿ- ಯಾವಾಗ ನಡೆಯಲಿದೆ ಸಂದರ್ಶನ:

ಸಂದರ್ಶನದ ಸ್ಥಳ: ಐಟಿಸಿ ಫಾರ್ಚೂನ್​ ಪಾರ್ಕ್,​ ಜೆಪಿ ಸೆಲೆಸ್ಟಿಯಲ್​, 5, 43, ರೇಸ್​ ಕೋರ್ಸ್​ ರೋಡ್​, ಆನಂದ್​ ರಾವ್​ ಸರ್ಕಲ್​, ರೇಸ್​ ಕೋರ್ಸ್​​, ಗಾಂಧಿ ನಗರ, ಬೆಂಗಳೂರು- 650009.
.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸೇರಿದಂತೆ ಅಧಿಕೃತ ಅಧಿಸೂಚನೆ ವೀಕ್ಷಣೆಗೆ airindia.in ಈ ಅಧಿಕೃತ ಜಾಲತಾಣಕ್ಕೆ ಅಭ್ಯರ್ಥಿಗಳು ಭೇಟಿ ನೀಡಬಹುದಾಗಿದೆ.
ಈ ದಾಖಲೆ ಅವಶ್ಯ: ಈ ಹುದ್ದೆಗೆ ಹಾಜರಾಗುವ ಇಚ್ಛೆಯನ್ನು ಹೊಂದಿರುವ ಅಭ್ಯರ್ಥಿಗಳು ಜೂನ್​ 22ರಂದು ನಡೆಯುವ ಈ ಸಂದರ್ಶನದಲ್ಲಿ ತಮ್ಮ ಶೈಕ್ಷಣಿಕ ದಾಖಲಾತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಂಡೊಯ್ಯುವುದು ಅತಿ ಮುಖ್ಯ. ಜೊತೆಗೆ ಹೊಸ ಅಪ್​ಡೇಟ್​ ರೆಸ್ಯೂಮ್​ ಅನ್ನು ಜೊತೆಗೆ ಎಸ್​ಇಪಿ ಕಾರ್ಡ್​​ ಅನ್ನು ಹೊಂದಿರಬೇಕು. ಅಭ್ಯರ್ಥಿಗಳು ವೆಸ್ಟರ್ನ್​ ಫಾರ್ಮಲ್​ ಧಿರಿಸಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಿದೆ