ಯೋಗದಿಂದ ನೆಮ್ಮದಿ, ಆರೋಗ್ಯ ದೊರಕುತ್ತದೆ : ಡಾ.ವೀರೇಂದ್ರ ಹೆಗ್ಗಡೆ

ಶಿವಮೊಗ್ಗ: ವಿಶ್ವಕ್ಕೆ ಭಾರತ ಯೋಗವನ್ನು ಕೊಡುಗೆಯಾಗಿ ನೀಡಿದೆ. ಯೋಗದಿಂದ ನೆಮ್ಮದಿ, ಆರೋಗ್ಯ ದೊರಕುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ
ಆಚಾರ್ಯ ಎಂದರೆ ಮೊದಲು ಅನುಭವಿಸಿ ನಂತರ ಪ್ರಚಾರ ಮಾಡುವವರು. ಪ್ರಾಚಾರ್ಯರು ಹೇಳುವುದಷ್ಟೆ ಎಂದರು. ಆರೋಗ್ಯವಂತರು, ದೀರ್ಘಾಯುಷಿಗಳಾಗಿ ಬಾಳಿರಿ. ನೀವು ನಿಮ್ಮ ವ್ಯಕ್ತಿತ್ವದಿಂದ ಗುರುತಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಭಾರತ ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡುವ ಮೂಲಕ ಪ್ರಪಂಚಕ್ಕೆ ಶಾಂತಿ, ನೆಮ್ಮದಿ ನೀಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶಿವಮೊಗ್ಗದ ಹೊರ ವಲಯದಲ್ಲಿ‌ರುವ ಪ್ರೇರಣಾ ಹಾಲ್​ನಲ್ಲಿ‌ ನಡೆದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು “ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಿನುಗುತ್ತಿದೆ. ಮೊದಲೆಲ್ಲ ಭಾರತವನ್ನು ಬಡ ರಾಷ್ಟ್ರ ಎನ್ನುತ್ತಿದ್ದರು. ಈಗ ಬಡಾ(ದೊಡ್ಡ) ರಾಷ್ಟವಾಗಿದೆ. ಮುಂಚೆ ಹೀಯಾಳುಸುತ್ತಿದ್ದವರು ಈಗ ನಮ್ಮನ್ನು ಗೌರವದಿಂದ ನೋಡುತ್ತಿದ್ದಾರೆ” ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಬಹು ದಿನಗಳಿಂದ ಮಳೆಯನ್ನು ನೀರಿಕ್ಷೆ ಮಾಡ್ತಾ ಇದ್ದೇವೆ. ಯೋಗ ದಿನದಂತೆ ಮಳೆ ಬಂದಿದ್ದು ನಮಗೆ ಸಂತೋಷವನ್ನು ತಂದಿದೆ. ಇದರಿಂದ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿತ್ತು. ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ಎನ್​ಇಎಸ್ ಮೈದಾನದಲ್ಲಿ ನಡೆಸಲು‌ ನಿರ್ಧರಿಸಲಾಗಿತ್ತು. ಆದರೆ, ಮಳೆಯಿಂದ ಅಲ್ಲಿ ಎಲ್ಲಾವು ಅಸ್ತವ್ಯಸ್ತವಾದ ಕಾರಣ ಪ್ರೇರಣ ಹಾಲ್​ಗೆ ವರ್ಗಾವಣೆ ಆಗಿದೆ. ಮಳೆ ಬಂದು ಅಡಚಣೆ ಆಗಿತ್ತು. ಆದರೆ ಸಂಸದ ರಾಘವೇಂದ್ರ ಅವರು ಯಾವುದೇ ಚಿಂತೆ ಮಾಡಬೇಡಿ ಎಂದು ಪ್ರೇರಣ ಹಾಲ್​ನಲ್ಲಿ ಅನುಕೂಲ ಮಾಡಿ‌ಕೊಟ್ಟರು ಎಂದರು.

ಮೋದಿ ವಿಶ್ವದ ಗಮನ ಸೆಳೆದಿದ್ದಾರೆ: ನಂತರ ಸುದ್ದಿಗಾರೂಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು “ಎಲ್ಲರೂ ತಮ್ಮ ಆರೋಗ್ಯಕ್ಕಾಗಿ ನಿತ್ಯ ಅರ್ಧಗಂಟೆ ಯೋಗಾಸನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು. ಇಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅನೇಕರ ಗಣ್ಯರ ಸಮಕ್ಷಮ ಅಮೆರಿಕದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗ ಮಾಡುವ ಮೂಲಕ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ ಎಂದರು. ಅಮೆರಿಕದಲ್ಲಿ ಒಂದು ಅದ್ಭುತವಾದ ಕಾರ್ಯಕ್ರಮ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಡಾ. ವೀರೇಂದ್ರ ಹೆಗ್ಗಡೆ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಶ್ರೀಗಳ ಸಮ್ಮುಖದಲ್ಲಿ ಯೋಗ ದಿನ ಆಚರಣೆ ನಡೆದಿರುವುದು ವಿಶೇಷ ಎಂದರು.

ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆ ಸಾಗರದ ಸಂಧ್ಯಾ ಸಾಗರ ಅವರು ವೇದಿಕೆ ಮೇಲೆ ತಮ್ಮ ಯೋಗಾ ಕಲೆಯನ್ನು ಪ್ರದರ್ಶಿಸಿದರು. ಇವರು ವಿವಿಧ ಯೋಗ ಭಂಗಿಗಳನ್ನು ನೀರು ಕುಡಿದಷ್ಟೆ ಸಲಿಸಲಾಗಿ‌ ಮಾಡಿ ಮುಗಿಸಿದರು. ನಂತರ ಇವರಿಗೆ ಯೋಗ ರತ್ನ ಪ್ರಶಸ್ತಿಯನ್ನು ಡಾ.ವಿರೇಂದ್ರ ಹೆಗ್ಗಡೆ ಅವರು ಪ್ರಧಾನ ಮಾಡಿದರು. ನಂತರ ವೇದಿಕೆಯಲ್ಲಿ ಹಾಜರಿದ್ದ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರರಿಗೂ ಸನ್ಮಾನ ನಡೆಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ಜ ಸುಮಾರು 1,500 ಮಂದಿ ಏಕ ಕಾಲದಲ್ಲಿ ಯೋಗಾಸನದಲ್ಲಿ ಭಾಗಿಯಾಗಿದ್ದರು.
ಎಲ್ಲ ವಸ್ತುಗಳನ್ನು ಹೇಗೆ ಬಳಕೆ ಮಾಡಬೇಕೆಂದು ಮ್ಯಾನುವಲ್ ನೀಡಲಾಗಿರುತ್ತದೆ. ಅದೇ ರೀತಿ ಮನುಷ್ಯ ಹೇಗೆ ಬಾಳಬೇಕೆಂದು ನಿಯಮವಿದೆ. ಇದಕ್ಕೆ ನಾವು ಯೋಗವನ್ನು ಅಭ್ಯಾಸ ಮಾಡುವುದು ಅತಿ ಮುಖ್ಯ. ಇಂದು ಎಲ್ಲದಕ್ಕೂ ಮಿಷನ್ ಬಂದಿದೆ. ದೇಹವನ್ನು ಕಟ್ಟು‌ ನಿಟ್ಟಾಗಿ ಇಟ್ಟು ಕೊಳ್ಳಲು ಯೋಗ ಸಹಾಯಕವಾಗುತ್ತದೆ. ನಮ್ಮ ಕಾಲೇಜಿನಿಂದ ರಾಜ್ಯದ ಹಲವು ಕಡೆ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಅಲ್ಲದೇ ಯೋಗ ಗುರುಗಳನ್ನು ತಯಾರು ಮಾಡುತ್ತಿದ್ದೇವೆ. ಯೋಗಾಭ್ಯಾಸ ನಡೆಸಿದಾಗ ಸಿಗುವ ವಿಶ್ರಾಂತಿ ಅತಿ ಸುಖಕರವಾಗಿರುತ್ತದೆ ಎಂದರು.