ಉಡುಪಿ: ಜಿಲ್ಲೆಯ ಸಾರ್ವಜನಿಕರು ಜೂನ್ ಅಂತ್ಯದೊಳಗೆ ವೆಬ್‌ಸೈಟ್ ಮೂಲಕ ತೆರಿಗೆ ಪಾವತಿಸಿದ್ದಲ್ಲಿ ಶೇ.10 ರಷ್ಟು ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ವೆಬ್‌ಸೈಟ್ bsk.karnataka.gov.in ನಲ್ಲಿ ಮೊಬೈಲ್ ಮೂಲಕ ಓ.ಟಿ.ಪಿ ಪಡೆದು ನೋಂದಾಯಿಸಿಕೊಳ್ಳಬೇಕು.
ನಂತರ ಆಸ್ತಿ ತೆರಿಗೆ ಆಯ್ಕೆ ಮಾಡಿ, ತೆರಿಗೆ ಪಾವತಿಸಲು ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ, ಹೆಸರು ನಮೂದಿಸಿ, ಆಸ್ತಿಯನ್ನು ಪಡೆಯಬೇಕು. ಆಸ್ತಿಯ ಬೇಡಿಕೆಯು ಸರಿಯಾಗಿದೆಯೇ ಎಂದು ಪರಿಶೀಲಿಸಿ, ಆನ್‌ಲೈನ್ ಪಾವತಿಗೆ
ಮುಂದಾಗಬೇಕು. ಆನ್‌ಲೈನ್ ಪಾವತಿಗಾಗಿ ಕ್ಯೂ ಆರ್ ಕೊಡ್ ಸ್ಕ್ಯಾನ್, ಗೂಗಲ್ ಪೇ ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್ ಆಯ್ಕೆಗಳು ಲಭ್ಯವಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-22032238 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.