ಮಂಗಳೂರು: ಮಂಗಳೂರಿನ ಎಕ್ಸ್‍ಪರ್ಟ್ ಕೋಚಿಂಗ್ ಕ್ಲಾಸಸ್‍ನಲ್ಲಿ ನೀಟ್ ದೀರ್ಘಾವಧಿ ಕೋಚಿಂಗ್ ಪಡೆದ ಶೇ.99.24ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯಲು ಅರ್ಹತೆ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
600ಕ್ಕಿಂತ ಅಧಿಕ ಅಂಕವನ್ನು 6 ವಿದ್ಯಾರ್ಥಿಗಳು, 550ಕ್ಕಿಂತ ಅಧಿಕ ಅಂಕವನ್ನು 11, 500ಕ್ಕಿಂತ ಅಧಿಕ ಅಂಕವನ್ನು 25, 450ಕ್ಕಿಂತ ಅಧಿಕ ಅಂಕವನ್ನು 42, 400ಕ್ಕಿಂತ ಅಧಿಕ ಅಂಕವನ್ನು 60 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕಳೆದ ಬಾರಿ ಅಂದರೆ ನೀಟ್ 2022ರ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ವೈದ್ಯಕೀಯ ಶಿಕ್ಷಣ ಪ್ರವೇಶದಿಂದ ವಂಚಿತರಾದ ಮತ್ತು ತಮಗೆ ಬೇಕಾದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಸಿಗದ, ಪದವಿ ಪೂರ್ವ ಶಿಕ್ಷಣವನ್ನು ಎಕ್ಸ್‍ಪರ್ಟ್ ಹೊರತು ಪಡಿಸಿ ಬೇರೆ ಕಾಲೇಜುಗಳಲ್ಲಿ ಕಲಿತ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಎಕ್ಸ್‍ಪರ್ಟ್‍ನಿಂದ ಕೋಚಿಂಗ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಪಿಯು ಪರೀಕ್ಷೆಯೊಂದಿಗೆ ಇತರ ಸ್ಪರ್ಧಾತ್ಮಕ ಪರೀಕ್ಷೆ ಅತ್ಯಗತ್ಯವಾದುದರಿಂದ ನೀಟ್ ಪರೀಕ್ಷೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಿರೀಕ್ಷಿತ ಯಶಸ್ಸು ಕೆಲವೊಂದು ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಈ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಅಧ್ಯಯನದ ಕನಸು ಕಮರಿ ಹೋಗಬಾರದು ಎಂಬ ಸದುದ್ದೇಶದಿಂದ ಕಳೆದ 3 ದಶಕಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿರುವ ಎಕ್ಸ್‍ಪರ್ಟ್ ಸಂಸ್ಥೆಯು 2016ರಲ್ಲಿ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಆರಂಭಿಸಿತ್ತು.
ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ:(ಆವರಣದೊಳಗಿರುವುದು ಕಳೆದ ವರ್ಷದ ಅಂಕ)
ಅಮೃತಾ ಪಿ. ಭಕ್ತ 630 (425), ಕೈಲಾಶ್ ಎಸ್.ಹೆಗ್ಡೆ 626 (280), ಅಭಿಶಾಂತ್ ಎಂ. ಹಿರೇಮಠ 620 (410), ಸಾಯಿ ಪ್ರದೀಪ ಕುಮಾರ್ ಪಾಟೀಲ್ 612 (398), ಪ್ರತೀಕ್ ರಾವ್ 603 (423), ಪ್ರಖ್ಯಾತ್ ಶೆಟ್ಟಿ 600 (413), ವರ್ಷಾ ಜಿ. ವೈ. 579 (478), ಅರ್ಪಿತಾ ಆರ್. 578 (252), ಭೂಮಿಕಾ ಸಿ. 576 (443), ಅರ್ಜುನ್ ಕ್ರಿಸ್ಟ್ ಮ್ಯಾಥ್ಯೂ 570 (453), ಪ್ರಜೀತ್ ಗಣೇಶ್ ಶೆಟ್ಟಿ 567 (205), ಅಧಿಶ್ ಕ್ರಾಸ್ತಾ 545 (321), ಧೃತಿ ಟಿ.ಎಸ್. 540 (349), ಸುನೀಲ್ ಶಿವಕುಮಾರ ಜಿಡಗಿ 533 (248), ಶ್ರದ್ಧಾ ಹರೀಶ 533 (292), ಚೇತನ್ ಡಿ.ಎಂ. 533 (382), ಡಿ.ಎಸ್. ಕುಶಾಲ್ 532 (376), ಸಾಕಿಬ್ ಉಲ್ಲಾ ಷರೀಫ್ 525 (258), ಕಾವ್ಯ ಉಮೇಶ ಹವಳೆ 523 (327), ವೀಕ್ಷತ್ ಪಿ. ಶೆಟ್ಟಿ 519 (330), ಅನುಷ್ ನಾಯಕ್ 515 (273), ಕಿಶೋರ್ ಕೆ.ಎನ್. 513 (185), ದೀಕ್ಷಾ ಪೈ 510 (184), ನಿಹಾರಿಕಾ ಕೆ. 506 (349), ಮಹೇಶ್ವರಿ 504 (362) ಅಂಕ ಗಳಿಸಿದ್ದಾರೆ.
ಕಳೆದ ವರ್ಷ ದೀರ್ಘಾವಧಿ ನೀಟ್ ಕೋಚಿಂಗ್‍ಗೆ ಸೇರಿದ ಶೇ. 90ರಷ್ಟು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ದೊರೆತಿದೆ. ಈ ವರ್ಷವೂ ಅತ್ಯುತ್ತಮ ಫಲಿತಾಂಶ ಬಂದಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರವೇಶ ಸಿಗುವುದು ಬಹುತೇಕ ಖಚಿತ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.