ಬೊಂದೆಲ್ ಲಾಫ್ಟರ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯಕ್ಕಾಗಿ ಲಾಫ್ಟರ್ ಸೆಶನ್

ಮಂಗಳೂರು: ನಗರದ ಬೊಂದೆಲ್ ಜಂಕ್ಷನ್‌ನ ಜಾನ್ಲಿನ್ ಕಾಟೇಜ್‌ನಲ್ಲಿ ಕಳೆದ 20 ವರುಷಗಳಿಂದ ಲಾಫ್ಟರ್ ಕ್ಲಬ್‌ಗಳನ್ನು ನಡೆಸುತ್ತಿರುವ ಬೊಂದೆಲ್ ಲಾಫ್ಟರ್ ಕ್ಲಬ್ ವತಿಯಿಂದ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಾಫ್ಟರ್ ಸೆಶನ್‌ಗಳನ್ನು ಜೂನ್ 3 ಮತ್ತು 5 ರಂದು ನಡೆಸಲಾಯಿತು.

ಬೊಂದೆಲ್ ಕ್ಲಬ್ಬಿನ ಸಂಸ್ಥಾಪಕ ಜಾನ್ ಬಿ. ಮೊಂತೇರೊ ಮತ್ತು ಕ್ಲಬ್ಬಿನ ಹಿರಿಯ ಸದಸ್ಯ ನಿವೃತ್ತ ಪ್ರಾಧ್ಯಾಪಕ ಖಾಲಿದ್ ಅನ್ಸಾರಿ ಮತ್ತು ಬೊನವೆಂಚರ್ ಡಿಸೋಜಾ ಇವರು ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಮಾರ್ಗದರ್ಶನ ನೀಡಿದರು.

ಪ್ರಾಂಶುಪಾಲೆ ಡಾ| ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಅವರ ಮಾರ್ಗದರ್ಶನದಲ್ಲಿ ಮಾನಸಿಕ ಆರೋಗ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಶ್ರೀರಂಜನಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

ಇದಕ್ಕೂ ಮುನ್ನ ಎಪ್ರಿಲ್ 4 ರಂದು ಜಾನ್ ಮೊಂತೇರೊ ಮತ್ತು ಪ್ರೊ| ಖಾಲಿದ್ ಅನ್ಸಾರಿ ಇವರನ್ನು ಬಲ್ಮಠ ಎ.ಜೆ. ಟವರ್ಸ್ ನ ಕಾಲೇಜು ಆವರಣದಲ್ಲಿ ಬೋಧಕರಿಗಾಗಿ ನಗೆ ಅಧಿವೇಶನವನ್ನು ನಡೆಸಲು ಆಹ್ವಾನಿಸಲಾಗಿತ್ತು.