ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯು ತನ್ನ ವಿನೂತನ ಪ್ರಯತ್ನದಲ್ಲಿ ಕೇಳರಿಯದ ಕನ್ನಡದ ಪದಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ತನ್ನ ಟ್ವಿಟ್ವರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅರಣ್ಯ ಇಲಾಖೆಯು “ಕೇಳರಿಯದ ಕನ್ನಡ ಪದ ಪರಿಚಯ. ಇಂದಿನಿಂದ ಪ್ರತಿವಾರ ಅರಣ್ಯಕ್ಕೆ ಸಂಬಂಧ ಪಟ್ಟ ಒಂದು ಅಪರೂಪದ ಕನ್ನಡ ಪದ ಪರಿಚಯ ಮಾಡಿಕೊಳ್ಳೋಣ” ಎಂದು ಟ್ವೀಟ್ ಮಾಡಿದ್ದು, ಇಂದು ‘ಕಾಸರ’ ಎನ್ನುವ ಪದದ ಅರ್ಥವಿವರಣೆಯನ್ನು ನೀಡಿದೆ.
ಕಾಸರ ಎಂದರೆ ಕಾಡು, ಕಾಂತಾರ, ಅಡವಿ, ಅರಣ್ಯ(ಎತ್ತರವಾಗಿ ಒತ್ತೊತ್ತಾಗಿ ಬೆಳೆಯುವ ಮರಗಿಡಗಳ ಪ್ರದೇಶ).
ಇಂದಿನಿಂದ ಪ್ರತಿವಾರವೂ ಹೊಸತೊಂದು ಕನ್ನಡ ಪದದ ಪರಿಚಯವನ್ನು ಇಲಾಖೆಯು ಮಾಡಲಿದ್ದು, ಇದರಿಂದ ಕನ್ನಡ ಭಾಷೆ ಉಳಿಯುವುದರ ಜೊತೆ ಅರಣ್ಯ ಜಗತ್ತಿನ ಪರಿಚಯವೂ ಆಗಲಿದೆ.