ಉಡುಪಿ: ಜೂನ್ 3, 4 ರಂದು ‘ರಂಗಭೂಮಿ‌ ಆನಂದೋತ್ಸವ ಹಾಗೂ ಸಂಸ್ಕೃತಿ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಉಡುಪಿ: ರಂಗಭೂಮಿ ಉಡುಪಿ ಇದರ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ, ಕುತ್ಪಾಡಿ ಆನಂದ ಗಾಣಿಗರ ಕುಟುಂಬಸ್ಥರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ‌ ಸಹಯೋಗದೊಂದಿಗೆ ಇದೇ ಬರುವ ಜೂನ್ 3 ಮತ್ತು 4 ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿ. ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ‘ರಂಗಭೂಮಿ‌ ಆನಂದೋತ್ಸವ- 2023’ ಕಾರ್ಯಕ್ರಮ ನಡೆಯಲಿದೆ‌.ಉಡುಪಿಯಲ್ಲಿಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು ಅವರು, ಜೂನ್ 3ರಂದು […]

ಮಕ್ಕಳ ಶಿಕ್ಷಣದ ಬೆಳವಣಿಗೆಗೆ ಶೇ.೬೦ ರಷ್ಟು ಶಿಕ್ಷಕರ ಸಹಾಯಬೇಕು. ಉಳಿದ ಶೇ.೪೦ ಮಕ್ಕಳ ತಂದೆತಾಯಿಯ ಜವಾಬ್ದಾರಿಯಾಗಿದೆ: ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆಯಾಗಲಾರದು. ಈಗಾಗಲೇ ನೇರನೇಮಕಾತಿ ಮೂಲಕ ೧೩೦ ಶಿಕ್ಷಕರು ಹಾಗೂ ೧೮೦ ಅತಿಥಿ ಶಿಕ್ಷಕರು ನೇಮಕಗೊಳ್ಳಲಿದ್ದಾರೆ ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಬುಧವಾರ ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಶಿಕ್ಷಣದ ಬೆಳವಣಿಗೆಗೆ ಶೇ.೬೦ ರಷ್ಟು ಶಿಕ್ಷಕರ ಸಹಾಯಬೇಕು. ಉಳಿದ ಶೇ.೪೦ ಮಕ್ಕಳ ತಂದೆತಾಯಿಯ ಜವಾಬ್ದಾರಿಯಾಗಿದೆ. ಈ ಎರಡೂ ವಿಚಾರಗಳು ಸಾಧ್ಯವಾದರೆ ಶಿಕ್ಷಣದಲ್ಲಿ ಪ್ರಗತಿ ಸಾಧ್ಯವಾಗುತ್ತದೆ. […]

ಹೆಬ್ರಿ: ಮನೆಯಿಂದ ಹೊರಟ ಗರ್ಭಿಣಿ ನಾಪತ್ತೆ

ಉಡುಪಿ, ಜೂ.01: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿಯ ಗುಡಾಲಬೆಟ್ಟು ನಿವಾಸಿ ಲಕ್ಷ್ಮಿ (22) ಎಂಬ 6 ತಿಂಗಳ ಗರ್ಭಿಣಿಯು ಮೇ 25 ರಂದು ಬೆಳಗ್ಗೆ 9 ಗಂಟೆಯಿoದ ಸಂಜೆ 5:30 ಗಂಟೆಯ ಮಧ್ಯಾವಧಿಯಲ್ಲಿ ಯಾರಿಗೂ ಹೇಳದೇ ಮನೆಯಿಂದ ಹೊರಟು ಕಾಣೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ, ಸಪೂರ ಶರೀರ, ಗೋಧಿ ಮೈ ಬಣ್ಣ, ಎರಡು ಹುಬ್ಬುಗಳ ಮದ್ಯೆ ಎಳ್ಳಾಕಾರದ ಮಚ್ಚೆ ಹೊಂದಿದ್ದು, ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ […]

ಜೂ.2: ‘ನನ್ನ ಕ್ಷೇತ್ರ- ನನ್ನ ಕನಸು’ ಶಾಸಕರೊಂದಿಗೆ ಒಂದು ಸಂವಾದ ಕಾರ್ಯಕ್ರಮ

ಉಡುಪಿ: ತಿಂಗಳೆ ಪ್ರತಿಷ್ಠಾನದ ವತಿಯಿಂದ ನನ್ನ ಕ್ಷೇತ್ರ- ನನ್ನ ಕನಸು ಒಂದು ಸಂವಾದ ಕಾರ್ಯಕ್ರಮವನ್ನು ಜೂನ್ 2ರಂದು ಮಧ್ಯಾಹ್ನ 3.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದ್ದು, ಈ ಸಂವಾದದಲ್ಲಿ ಜಿಲ್ಲೆಯ‌ ಐದು ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಂಗಳೆ ಪ್ರತಿಷ್ಠಾನದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಶ್ರೀರಾಜ ಗುಡಿ ಉಪಸ್ಥಿತರಿರಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, […]

3 ರಂದು ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾಆದಿಶಕ್ತಿ ಕ್ಷೇತ್ರದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜೂನ್ 3 ಶನಿವಾರದಂದು ಹುಣ್ಣಿಮೆಯ ಪರ್ವಕಾಲದಲ್ಲಿ ಶ್ರೀಚಕ್ರ ಪೀಠ ಸುರಪೂಜಿತೆಗೆ ಏಕಕಾಲ ಶ್ರೀಚಕ್ರ ಮಂಡಲ ಪೂಜೆ ಸಂಪನ್ನಗೊಳ್ಳಲಿದೆ. ಭಾರತದ ಹೆಸರಾಂತ ಜಿಮ್ ಟ್ರೈನರ್ ವಿನೋದ್ ಜನ್ನ ಮತ್ತು ಮನೆಯವರ ವತಿಯಿಂದ ಈ ಮಹಾನ್ ಪೂಜೆ ಪ್ರಾಯಶ್ಚಿತ್ತ ಪೂರಕವಾಗಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಳ್ಳಲಿರುವುದು. ಪ್ರಾತ:ಕಾಲದಿಂದ ಶ್ರೀಚಕ್ರ ಮಂಡಲ ರಚನೆ ಆರಂಭಗೊಳ್ಳಲಿದ್ದು, ಸಂಜೆ […]