ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ (GDP) 2023 ರ ಜನವರಿ-ಮಾರ್ಚ್ನಲ್ಲಿ ನಿರೀಕ್ಷಿತಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಅಂದರೆ 6.1 ಶೇಕಡಾ ಗಳಿಸಿದ್ದು ಇದು 2022-23 ರ ಪೂರ್ಣ ವರ್ಷದ ಬೆಳವಣಿಗೆಯ ಅಂದಾಜನ್ನು 7.2 ಶೇಕಡಾಕ್ಕೆ ತಳ್ಳಲಿದೆ ಎಂದು ಬುಧವಾರ ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಇದು 2022-23 ವರ್ಷಕ್ಕೆ ಕಚೇರಿಯ ಶೇ.7 ಬೆಳವಣಿಗೆ ದರದ ಮುಂಗಡ ಅಂದಾಜಿನ ಪ್ರತಿಶತಕ್ಕಿಂತ ಹೆಚ್ಚಾಗಿದೆ.
ನಿರ್ಮಾಣ, ವ್ಯಾಪಾರ, ಹೋಟೆಲ್ಗಳು, ಸಾರಿಗೆ ವಲಯಗಳ ನೇತೃತ್ವದ ಸೇವಾ ವಲಯದ ಬೆಳವಣಿಗೆಯು ಹೆಚ್ಚಿನ ಹೂಡಿಕೆಯೊಂದಿಗೆ ಬೆಳವಣಿಗೆಯನ್ನು ಬೆಂಬಲಿಸಿದೆ.
ಆರ್ಥಿಕ ವರ್ಷ23 ರಲ್ಲಿ ಭಾರತದ ಜಿಡಿಪಿ 2021-22 ರಲ್ಲಿ ದಾಖಲಾದ 9.1 ಶೇಕಡಾ ಬೆಳವಣಿಗೆ ದರಕ್ಕಿಂತ ಕಡಿಮೆ ಇರಲಿದೆ ಎನ್ನಲಾಗಿದೆ. 2022-23ರಲ್ಲಿ ತ್ರೈಮಾಸಿಕ ಅವಧಿಯಲ್ಲಿ, ಬೆಳವಣಿಗೆ ದರ ಅನುಕ್ರಮವಾಗಿ, ಏಪ್ರಿಲ್-ಜೂನ್ನಲ್ಲಿ ಆರ್ಥಿಕತೆಯು ಶೇಕಡಾ 13.1 ರಷ್ಟು, ಜುಲೈ-ಸೆಪ್ಟೆಂಬರ್ ನಲ್ಲಿ 6.2 ಶೇ, ಅಕ್ಟೋಬರ್-ಡಿಸೆಂಬರ್ ನಲ್ಲಿ 4.5 ಶೇ.
ಚತುರ್ಥ ತ್ರೈಮಾಸಿಕದಲ್ಲಿ ಕೃಷಿ ಬೆಳವಣಿಗೆಯು 5.5 ಶೇಕಡಾ ಇರಲಿದೆ ಎಂದು ಅಂದಾಜಿಸಲಾಗಿದೆ. ಉತ್ಪಾದನಾ ಬೆಳವಣಿಗೆಯು ಹಿಂದಿನ ಎರಡು ತ್ರೈಮಾಸಿಕಗಳಲ್ಲಿ ಕುಂಠಿತಗೊಂಡ ನಂತರ ನಂತರ ಚತುರ್ಥ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 4.5 ಶೇಕಡಾ ಬೆಳವಣಿಗೆಗೆ ಮರುಕಳಿಸಿದೆ. ಪೂರ್ಣ ವರ್ಷಕ್ಕೆ, ಹಿಂದಿನ ತ್ರೈಮಾಸಿಕದ ಪರಿಷ್ಕರಣೆಗಳು ಉತ್ಪಾದನಾ ಬೆಳವಣಿಗೆಯನ್ನು ಈಗ ಆರ್ಥಿಕ ವರ್ಷ 23ರಲ್ಲಿ 1.3 ಶೇಕಡಾ ಎಂದು ಅಂದಾಜಿಸಲಾಗಿದೆ.
022-23ರ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳು “ಜಾಗತಿಕ ಸವಾಲುಗಳ ನಡುವೆ ಭಾರತೀಯ ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನು ಒತ್ತಿಹೇಳುತ್ತವೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ.
ಈ ದೃಢವಾದ ಕಾರ್ಯಕ್ಷಮತೆಯು ಸಮಗ್ರ ಆಶಾವಾದ ಮತ್ತು ಬಲವಾದ ಸ್ಥೂಲ-ಆರ್ಥಿಕ ಸೂಚಕಗಳ ಜೊತೆಗೆ ನಮ್ಮ ಆರ್ಥಿಕತೆಯ ಭರವಸೆಯ ಪಥ ಮತ್ತು ನಮ್ಮ ಜನರ ಸ್ಥಿರತೆಗೆ ಉದಾಹರಣೆಯಾಗಿದೆ” ಎಂದು ಅವರು ಹೇಳಿದ್ದಾರೆ.