ಹಾಸನ: ಗೋವು ಕಳ್ಳತನ ಮಾಡಲು ಹೋದ ವ್ಯಕ್ತಿಯೋರ್ವ ಗೋವಿನಿಂದಲೇ ಸಾವೀಗೀಡಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಗೋಕಳ್ಳ ಗೋವಿಂದಪ್ಪ ಮೃತಪಟ್ಟವನು.
ತೋಟದ ಮನೆಯಲ್ಲಿದ್ದ ಹಸುವೊಂದನ್ನು ಕಳ್ಳತನ ಮಾಡಿ ಸ್ವಲ್ಪ ದೂರ ಸಾಗಿಸಿದ್ದ. ಅನಂತರ ನಿರ್ಜನ ಪ್ರದೇಶದಲ್ಲಿ ಗೋವಿನ ಕಾಲನ್ನು ಕಟ್ಟಲು ಮುಂದಾದಾಗ ಆತನ ಮರ್ಮಾಂಗಕ್ಕೆ ಗೋವು ಒದ್ದಿರುವ ಪರಿಣಾಮ ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದೆ ಎನ್ನಲಾಗಿದ್ದು, ಈ ಘಟನೆ ಸಂಬಂಧಿಸಿದಂತೆ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












