ಉಡುಪಿ: ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಯಶ್ ಪಾಲ್ ಸುವರ್ಣ ರವರ ವಿಜಯೋತ್ಸವ ವಾಹನ ಜಾಥಾ ಮತ್ತು ಅಭಿಮಾನಿಗಳ ಅಭಿನಂದನಾ ಸಮಾರಂಭವನ್ನು ಉಡುಪಿ ನಗರ ಬಿಜೆಪಿ ವತಿಯಿಂದ ಮೇ 25 ರಂದು ಆಯೋಜಿಸಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಪರ್ಕಳ ಹೈಸ್ಕೂಲ್ ಬಳಿ ವಿಜಯೋತ್ಸವದ ವಾಹನ ಜಾಥಾಕ್ಕೆ ಚಾಲನೆ ನೀಡಲಿದ್ದು, ಈ ವಾಹನ ಜಾಥಾ ಉಡುಪಿ ನಗರ ಮಂಡಲದ ಎಲ್ಲಾ ವಾರ್ಡ್ ಹಾಗೂ ಗ್ರಾಮ ಪಂಚಾಯತ್ ಮುಖ್ಯ ರಸ್ತೆಯಲ್ಲಿ ಸಾಗಿ ಬರಲಿದೆ. ಸಂಜೆ ಉಡುಪಿ ಕುಂಜಿಬೆಟ್ಟುವಿನ ಜಿಲ್ಲಾ ಬಿಜೆಪಿ ಕಚೇರಿ ಬಳಿಯಲ್ಲಿ ಅಭಿನಂದನಾ ಸಮಾರಂಭದ ಅಂಗವಾಗಿ ಸಂಜೆ 5.30 ಕ್ಕೆ ಕಾಪು ಪ್ರಶಂಸಾ ತಂಡದ ಬಲೆ ತೆಲಿಪಾಲೆ ಕಾರ್ಯಕ್ರಮ ಹಾಗೂ 6.30 ಕ್ಕೆ ಪಕ್ಷದ ವಿವಿಧ ಮುಖಂಡರ ಉಪಸ್ಥಿತಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ನಗರ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೃಹತ್ ವಾಹನ ಜಾಥ ಸಾಗುವ ಮಾರ್ಗ
ಪರ್ಕಳ ಹೈ ಸ್ಕೂಲ್ – ಮಣಿಪಾಲ್ – ಸಿಂಡಿಕೇಟ್ ಸರ್ಕಲ್ – ಕಾಯಿನ್ ಸರ್ಕಲ್ – ಪೆರಂಪಳ್ಳಿ ಚರ್ಚ್ – ಬಾಳಿಗ ಆಸ್ಪತ್ರೆ –ಮನೋಲಿ ಗುಜ್ಜಿ ಬಸ್ ಸ್ಟ್ಯಾಂಡ್ – ಚಕ್ರತೀರ್ಥ – ಲಾ ಕಾಲೇಜು – ಎಮ್.ಜಿ.ಎಮ್ ಕಾಲೇಜು -ಬುಡ್ನಾರು – ಡಯಾನ ಟಾಕೀಸ್ – ಬೀಡಿನಗುಡ್ಡೆ – ಕೊಳಂಬೆ – ಮಿಷಿನ್ ಆಸ್ಪತ್ರೆ – ಲಯನ್ಸ್ ಸರ್ಕಲ್ – ಕಿನ್ನಿಮುಲ್ಕಿ – ಬಲಾಯಿಪಾದೆ – ಕಟ್ಟೆಗುಡ್ಡೆ – ಎಸ್.ಡಿ.ಎಮ್ ಹಿಂದೆ – ಸಂಪಿಗೆ ನಗರ – ಕುತ್ಪಾಡಿ- ಕಡೆಕಾರು – ಕಿದಿಯೂರು- ಕಲ್ಮಾಡಿ- ಮಲ್ಪೆ ಬಸ್ ಸ್ಟ್ಯಾಂಡ್ – ಕೊಳ- ಮಲ್ಪೆ ಬೀಚ್- ವಡಭಾಂಡೇಶ್ವರ- ಸಿಟಿಜನ್ ಸರ್ಕಲ್- ಕೊಡವೂರು – ಲಕ್ಷ್ಮೀ ನಗರ –ತೆಂಕನಿಡಿಯೂರು ಪಂಚಾಯತ್- ಪಾವಂಜಿ ಗುಡ್ಡೆ- ಬಡಾನಿಡಿಯೂರು ಹಳೆ ಪಂಚಾಯತ್ – ಕದಿಕೆ – ಗುಜ್ಜರಬೆಟ್ಟು – ಹೂಡೆ – ಕೆಮ್ಮಣ್ಣು -ಹಂಪನಕಟ್ಟೆ- ನೇಜಾರು- ಸಂತೆಕಟ್ಟೆ – ಅಂಬಾಗಿಲು – ಕರಾವಳಿ – ಬನ್ನಂಜೆ ಸರ್ಕಲ್ – ಬ್ರಹ್ಮಗಿರಿ ಸರ್ಕಲ್ – ಜೋಡು ಕಟ್ಟೆ – ಹೋಟೆಲ್ ಕಿದಿಯೂರು – ಸಿಟಿ ಬಸ್ ಸ್ಟ್ಯಾಂಡ್ – ಶಾರದ ಮಂಟಪ – ಬಿ.ಜೆ.ಪಿ ಆಫೀಸ್ ಕುಂಜಿಬೆಟ್ಟು