ಹಿರಿಯ ನಾಯಕರಿಗೆ ಬೇಡವಾದ ಗೃಹ ಖಾತೆ; ನೀರಾವರಿ, ವಿದ್ಯುತ್ ಮತ್ತು ಕಂದಾಯ ಖಾತೆಗಳಿಗೆ ಬಹು ಬೇಡಿಕೆ

ಬೆಂಗಳೂರು: ಸಿಎಂ ಹುದ್ದೆ ಬಳಿಕ ಎರಡನೇ ಶಕ್ತಿಯುತ ಸ್ಥಾನ ಎಂದು ಪರಿಗಣಿಸಲ್ಪಡುವ ಗೃಹ ಖಾತೆ ಪಡೆಯಲು ಯಾವ ಹಿರಿಯ ನಾಯಕರೂ ಮುಂದೆ ಬರುತ್ತಿಲ್ಲ ಎಂದು ವರದಿಯಾಗಿದೆ. ಯಾವುದೇ ಹಿರಿಯ ನಾಯಕರು ಪೊಲೀಸ್ ಇಲಾಖೆಯನ್ನು ನಿಭಾಯಿಸಲು ಉತ್ಸುಕರಾಗಿಲ್ಲ, ಆದರೆ ನೀರಾವರಿ, ವಿದ್ಯುತ್ ಮತ್ತು ಕಂದಾಯದಂತಹ ಖಾತೆಗಳಿಗೆ ಹೆಚ್ಚಿನ ಬೇಡಿಕೆಯಿದೆ.

ರಾಜ್ಯದಲ್ಲಿ ಸೌಹಾರ್ದತೆ ಕದಡುವವರ ವಿರುದ್ಧ ಕಡಿವಾಣ ಹಾಕುವಂತೆ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪೊಲೀಸ್ ಇಲಾಖೆಗೆ ಸೂಚಿಸಿದ್ದರೂ, ಗೃಹ ಇಲಾಖೆ ಹುದ್ದೆ ವಹಿಸುವವರಿಲ್ಲದೆ ಉಳಿದುಕೊಂಡಿದೆ ಎಂದು ವಿಷಯದ ಬಗ್ಗೆ ತಿಳಿದಿರುವವರು ಹೇಳಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ನೈಜ ಅಧಿಕಾರದ ಕೊರತೆ, ಇಲಾಖೆಯ ಒತ್ತಡ ಮತ್ತು ಕೆಲವು ಪ್ರಮುಖ ಕರ್ತವ್ಯಗಳನ್ನು ಹುದ್ದೆಯ ಅಧಿಕಾರದಿಂದ ತೆಗೆದುಹಾಕಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. “ಮೊದಲನೆಯದಾಗಿ, ಗುಪ್ತಚರ ಇಲಾಖೆಯು ಮುಖ್ಯಮಂತ್ರಿಯ ಬಳಿ ಇದೆ ಮತ್ತು ಗೃಹ ಸಚಿವರು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಎದುರಿಸಬೇಕು. ಪೊಲೀಸ್ ವರ್ಗಾವಣೆ ವಿಚಾರಕ್ಕೆ ಬಂದರೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಹೊರತು ಗೃಹ ಸಚಿವರಲ್ಲ,” ಎಂದು ಹಿಂದೆ ಗೃಹ ಸಚಿವರಾಗಿದ್ದ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ಮಾಧ್ಯಮ ತಿಳಿಸಿದೆ.

ಹೈಕಮಾಂಡ್ ಮಟ್ಟದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಗೃಹ ಖಾತೆಯನ್ನು ನೀಡುವ ಬಗ್ಗೆ ಮಾತುಕತೆ ನಡೆದಿದ್ದರೂ, ಪಕ್ಷವು ಇತರ ಅಭ್ಯರ್ಥಿಗಳ ಹುಡುಕಾಟದಲ್ಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ರಾಮಲಿಂಗಾ ರೆಡ್ಡಿ ಈ ಹುದ್ದೆ ಅಲಂಕರಿಸಿದ್ದರೂ, ಮುಖಂಡರು ಈ ಹುದ್ದೆಯತ್ತ ಆಸಕ್ತಿ ತೋರಿಲ್ಲ ಎಂದು ಕೆಪಿಸಿಸಿ ಪದಾಧಿಕಾರಿಗಳು ತಿಳಿಸಿದ್ದಾರೆ. ಕೆ.ಜೆ.ಜಾರ್ಜ್ ಮತ್ತು ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಅಭಿವೃದ್ಧಿಗೆ ಆಸಕ್ತಿ ತೋರಿದ್ದರೆ, ಎಂ.ಬಿ.ಪಾಟೀಲ್ ನೀರಾವರಿ ಇಲಾಖೆಗೆ ಒಲವು ತೋರಿದ್ದಾರೆ ಎಂದು ಬಲ್ಲ ಮುಖಂಡರು ತಿಳಿಸಿದ್ದಾರೆ. ಪರಮೇಶ್ವರ್ ಅವರು ಈ ಹುದ್ದೆಗೆ ಪಕ್ಷದ ಮೊದಲ ಆಯ್ಕೆಯಾಗಿ ಮುಂದುವರಿದಿದ್ದಾರೆ ಎನ್ನಲಾಗಿದೆ.