ಬೆಂಗಳೂರು: ಬುಧವಾರ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸರಿಸುಮಾರು 72.67% ಮತದಾನವಾಗಿದೆ. 2018 ರ ಚುನಾವಣೆಯಲ್ಲಿ 72.44% ಮತ್ತು 2013 ರಲ್ಲಿ 71.83% ಮತದಾನವಾಗಿತ್ತು.
ದ.ಕ ಜಿಲ್ಲೆಯಲ್ಲಿ 76.15% ಮತದಾನವಾಗಿದ್ದರೆ, ಉಡುಪಿಯಲ್ಲಿ 78.46% ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ವಾಧಿಕ 85.83% ಮತದಾನವಾಗಿದ್ದರೆ, ಬಿ.ಬಿ.ಎಂ.ಪಿ(ದಕ್ಷಿಣ) ದಲ್ಲಿ 52.80% ಮತದಾನ ನಡೆದಿದೆ.
ಮೂರು ಪ್ರಮುಖ ಎಕ್ಸಿಟ್ ಪೋಲ್ ಏಜೆನ್ಸಿಗಳು ಸೂಚಿಸಿದಂತೆ ಕರ್ನಾಟಕವು ಅತಂತ್ರ ಫಲಿತಾಂಶವನ್ನು ಸೂಚಿಸುತ್ತಿದೆ. ಬಹುತೇಕ ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್ ಗೆ ಬಹುಮತವನ್ನು ಸೂಚಿಸುತ್ತಿದ್ದರೆ ಮತ್ತೆ ಕೆಲವು ಪೋಲ್ ಗಳಿ ಈ ಬಾರಿಯೂ ಜೆ.ಡಿ.ಎಸ್ ಕಿಂಗ್ ಮೇಕರ್ ಆಗಬಹುದು ಎನ್ನುವುದನ್ನು ಸೂಚಿಸುತ್ತಿವೆ.
224 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 113. ಸರಿಸುಮಾರು 2,615 ಅಭ್ಯರ್ಥಿಗಳು ಕಣದಲ್ಲಿದ್ದೂ ಎಲ್ಲರ ಭವಿಷ್ಯವೂ ಮೇ.13 ರಂದು ನಿರ್ಧಾರವಾಗಲಿದೆ.