ಚುನಾವಣಾ ಕರ್ತ್ಯವ್ಯಕ್ಕೆ ತೆರಳುವ ಸಿಬ್ಬಂದಿಗಳಿಗಾಗಿ ತಾಲೂಕುವಾರು ಬಸ್ ವ್ಯವಸ್ಥೆಯ ಮಾಹಿತಿ ಇಲ್ಲಿದೆ

ಉಡುಪಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಧಿಕಾರಿ/ಸಿಬ್ಬಂದಿಗಳನ್ನು PRO, APRO, PO ಆಗಿ ನಿಯೋಜಿಸಿ ಆದೇಶಿಸಲಾಗಿದೆ. ನಿಯೋಜಿತ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ತಮಗೆ ನಿಯೋಜಿಸಿದ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಮೇ 09 ರಂದು ಹಾಜರಾಗಬೇಕಾಗಿದೆ.

ವಿವಿಧ ತಾಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ಹೊರಡುವ PRO, APRO, PO ಗಳನ್ನು ಸದ್ರಿಯವರ ತಾಲೂಕು ಕೇಂದ್ರಗಳಿಂದ ಸದ್ರಿಯವರನ್ನು ನಿಯೋಜಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಬಸ್ಸುಗಳ ವ್ಯವಸ್ಥೆಯನ್ನು ಈ ಕೆಳಗಿನ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ಮಾಡಲಾಗಿದೆ. ಬಸ್ಸುಗಳು ದಿನಾಂಕ: 09-05-2023 ರ ಪೂರ್ವಾಹ್ನ 6.30 ಗಂಟೆಗೆ ಹೊರಡಲಿದ್ದು, ನಂತರ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಹಾಗೂ ಚುನಾವಣೆ ಮುಗಿದು ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ. ಮತಯಂತ್ರಗಳನ್ನು ಹಸ್ತಾಂತರಿಸಿದ ನಂತರ ವಾಪಸ್ಸು ಕೇಂದ್ರಸ್ಥಾನಗಳಿಗೆ ಹೋಗಲು ಬಸ್ಸಿನ ವ್ಯವಸ್ಥೆ ಡಿಮಸ್ಟರಿಂಗ್ ಕೇಂದ್ರದಲ್ಲಿ ಮಾಡಲಾಗಿದೆ. ಇದನ್ನು ಗಮನಿಸಿಕೊಂಡು ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಇದರ ಉಪಯೋಗವನ್ನು ಪಡೆಯಬೇಕಾಗಿ ತಿಳಿಸಿದೆ.

ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ ಕೆಳಗಿನಂತಿವೆ.

ಬೈಂದೂರು ತಾಲೂಕು ಆಡಳಿತ ಸೌಧದ ಬಳಿ :
1). ಭೀಮಪ್ಪ, ಉಪತಹಶೀಲ್ದಾರರು, ಮೊ: 8105025695
2).ಕಾಂತರಾಜು, ಗ್ರಾಮ ಆಡಳಿತ ಅಧಿಕಾರಿ ಮೊ: 9482036207
3).ಶಶಿಕಾಂತ್‌ ದ್ವಿ.ದ.ಸ. ಮೊ: 9620428828

ಕುಂದಾಪುರ ತಾಲೂಕು ಗಾಂಧಿ ಮೈದಾನದಲ್ಲಿ:
1.ಭಾಗ್ಯಲಕ್ಷ್ಮಿ , ಉಪತಹಶೀಲ್ದಾರರು ಮೊ:9481144043
2.ವಾಲೇಕರ್‌ , ತಾಲೂಕು ಮೋಜಣಿದಾರರು ಮೊ: 9341049161
3.ರಂಗರಾಜು ಪ್ರ.ದ.ಸ. ಮೊ: 8197809032

ಉಡುಪಿ ಸರ್ವಿಸ್ ಬಸ್ ನಿಲ್ದಾಣ, ಬೋರ್ಡ್ ಹೈಸ್ಕೂಲು ಬಳಿ:
1).ಅಶ್ವಥ್‌, ಉಪತಹಶೀಲ್ದಾರರು: 9113042711
2) .ಪುನೀತ್‌ ಗ್ರಾಮ ಆಡಳಿತ ಅಧಿಕಾರಿ ಮೊ:9036681599
3).ಜಗಧೀಶ್‌ ಮುರನಾಳ ಗ್ರಾಮ ಆಡಳಿತ ಅಧಿಕಾರಿ ಮೊ: 8310498064

ಕಾಪು ಸರ್ವಿಸ್ ಬಸ್ ನಿಲ್ದಾಣದ ಬಳಿ:
1.ಸುಧೀರ್‌ ಕುಮಾರ್‌ ಶೆಟ್ಟಿ, ಕಂದಾಯ ನಿರೀಕ್ಷಕರು, ಕಾಪು ಮೊ:9008922727
2.ವಿಜಯ, ಗ್ರಾಮ ಆಡಳಿತ ಅಧಿಕಾರಿ ಮೊ: 9845162068
3.ಕ್ಲಾರೆನ್ಸ್‌ ಲೆಸ್ಟಾನ್‌, ಗ್ರಾಮ ಆಡಳಿತ ಅಧಿಕಾರಿ, ಮೊ: 8095101024

ಕಾರ್ಕಳ ಬಂಡಿಮಠ ಬಳಿ:
1).ಮಹೇಶ್‌ ಕುಮಾರ್‌, ಪ್ರ.ದ.ಸ ಮೊ: 9741560924
2)ಆನಂದ ಬಿ. ಗ್ರಾಮ ಆಡಳಿತ ಅಧಿಕಾರಿ,ಮೊ: 9844111931