ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 3 ನೇ ತಂಡದ ತರಬೇತಿ ಕಾರ್ಯಕ್ರಮದ ಉದ್ಘಾಟನೆ

ಉಡುಪಿ: ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 3 ನೇ ತಂಡದ ತರಬೇತಿಯ ಉದ್ಘಾಟನಾ ಸಮಾರಂಭ ಏ.17 ರಂದು ಬೆಳಿಗ್ಗೆ ಸಿಎಸ್‌ಪಿ ಕೇಂದ್ರ ಕಛೇರಿ ಮಲ್ಪೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೇಂದ್ರಿಯ ಕೈಗಾರಿಕಾ ಭದ್ರತಾ ದಳದ ಡೆಪ್ಯುಟಿ ಕಮಾಡೆಂಟ್ ಅಶುತೋಷ್ ಗೌರ್ ಮಾತನಾಡಿ, ಯಾವುದೇ ಉದ್ಯೋಗದಲ್ಲಿ ತರಬೇತಿಯು ಅತೀ ಅಗತ್ಯ. ತರಬೇತಿಯಲ್ಲಿ ಇಲಾಖೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಹಕಾರವಾಗುತ್ತದೆ. ಈ ಬಗ್ಗೆ ಸಿಐಎಸ್‌ಎಫ್ ವತಿಯಿಂದ ತರಬೇತಿಗೆ ಸಹಕಾರ ನೀಡಲಾಗುವುದು ಎಂದರು.

ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶರ್ಮಿಳಾ ಎಸ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ದೈಹಿಕವಾಗಿ ಸದೃಡರಾಗಿರುವುದು ಅತೀ ಅಗತ್ಯವಾಗಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಈ ತರಬೇತಿಯು ಇನ್ನಷ್ಟು ಸಹಕಾರಿಯಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಹಾಗೂ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಮಾತನಾಡಿ, ಇದು 3 ನೇ ತಂಡದ ತರಬೇತಿಯ ಉದ್ಘಾಟನಾ ಸಮಾರಂಭವಾಗಿದ್ದು, ಸಿಬ್ಬಂದಿಯವರಿಗೆ ತಂಗುವ ಬಗ್ಗೆ ಉತ್ತಮ ವ್ಯವಸ್ಥೆ ಮಾಡಲಾಗಿದ್ದು, ಈ 15 ದಿನಗಳ ಅವಧಿಯಲ್ಲಿ ನೀಡುವ ತರಬೇತಿಯನ್ನು ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಹಾಗೂ ಡಿವೈಎಸ್‌ಪಿ ಟಿ.ಎಸ್ ಸುಲ್ಫಿ ಸ್ವಾಗತಿಸಿದರು., ಕ್ರೈಂ ವಿಭಾಗದ ಪಿಐ ಪ್ರಮೋದ ಕುಮಾರ್ ವಂದಿಸಿದರು. ನಿಸ್ತಂತು ವಿಭಾಗದ ಪಿಎಸ್‌ಐ ಮನಮೋಹನ್ ನಿರೂಪಿಸಿದರು.