ಉಡುಪಿ: ಭಜರಂಗದಳವನ್ನ ನಿಷೇಧಿಸುವ ಯಾವುದೇ ಪ್ರಸ್ತಾವನೆ ಕಾಂಗ್ರೆಸ್ ನಲ್ಲಿಲ್ಲ.ರಾಜ್ಯ ಸರಕಾರಕ್ಕೆ ಅಂತಹ ಸಂಘಟನೆಯನ್ನ ನಿಷೇಧಿಸುವ ಯಾವುದೇ ಹಕ್ಕು ಇರುವುದಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ವೀರಪ್ಪ ಮೊಯಿಲಿ ಅವರು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ಅವರು ಈ ಹೇಳಿಕೆ ನೀಡಿದರು.
ವಲ್ಲಭಾಬಾಯಿ ಪಟೇಲ್ ಅವರನ್ನು ಬಿಜೆಪಿ ಈಗ ಆರಾಧನೆ ಮಾಡ್ತಾ ಇದೆ.ವಲ್ಲಭಾಬಾಯಿ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧಿಸಿದ್ದ ವ್ಯಕ್ತಿ.ಆದರೆ ಅವರನ್ನು ನಿಷೇಧಿಸಿದ್ದನ್ನು ಜವಾಹರ್ ಲಾಲ್ ನೆಹರು ಅವರು ವಾಪಾಸ್ ಪಡೆದರು.
ಸುಪ್ರೀಂ ಕೋರ್ಟ್ ದ್ವೇಷ ರಾಜಕಾರಣದ ಕುರಿತು ಈಗಾಗಲೇ ನಿರ್ದೇಶನ ನೀಡಿದೆ.ಆ ಕಾರಣವಾಗಿ ನಾವು ಸಂವಿಧಾನ ವಿರೋಧ ಯಾವ ಸಂಘಟನೆಗಳು ಮಾಡಿದರೂ ಅದು ತಪ್ಪೇ ಎಂದಿದ್ದೇವೆಯೇ ಹೊರತು.ಭಜರಂಗ ದಳ ನಿಷೇಧಿಸುವ ಕುರಿತು ಹೇಳೇ ಇಲ್ಲ. ಎಂದವರು ಹೇಳಿದ್ದಾರೆ.












