ಮೈಸೂರು: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯ ಸಹೋದರನ ಮನೆ ಮೇಲೆ ಐಟಿ ದಾಳಿ; 1 ಕೋಟಿ ವಶ

ಮೈಸೂರು: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಚುನಾವಣಾ ಆಯೋಗವು ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ, ಅಕ್ರಮ ಹಣದ ಕಂತೆ ಕಂತೆಗಳು ಎಗ್ಗಿಲ್ಲದೆ ಅತ್ತಿಂದಿತ್ತ ಚಲಿಸುತ್ತಿವೆ. ಇದೀಗ ಮೈಸೂರಿನಲ್ಲಿರುವ ಸುಬ್ರಮಣ್ಯ ರೈ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಒಂದು ಕೋಟಿ ರೂಪಾಯಿ ವಶಪಡಿಸಿಕೊಂಡಿದೆ. ಸುಬ್ರಮಣ್ಯ ರೈ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಸಹೋದರನಾಗಿದ್ದಾರೆ.

ಕಳೆದ ಕೆಲವು ವಾರಗಳಿಂದ ಐಟಿ ಇಲಾಖೆಯು ಕರ್ನಾಟಕದಲ್ಲಿ ಚುನಾವಣಾ ಸರಮಾಲೆಯ ದಾಳಿಗಳನ್ನು ನಡೆಸಿದೆ. ಹುಬ್ಬಳ್ಳಿ, ಬೆಂಗಳೂರು, ಮೈಸೂರು ಹಾಗೂ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಆದಾಯ ತೆರಿಗೆ ಇಲಾಖೆಗಳು ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಈ ವೇಳೆ ಮನೆ ಸಮೀಪದ ಮರದಲ್ಲಿ 1 ಕೋಟಿ ರೂಪಾಯಿ ನಗದನ್ನು ತೂಗುಹಾಕಲಾಗಿತ್ತು ಎಂದು ವರದಿಯಾಗಿದೆ.