ಕುಂದಾಪುರ: ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್ಗಳನ್ನು ಪಡೆಯುವುದರೊಂದಿಗೆ ಅಭೂತ ಪೂರ್ವ ಸಾಧನೆ ಮೆರೆದ ಕುಂದಾಪುರದ ಏಕೈಕ ಕಾಲೇಜ್ ಆಗಿ ಹೊರಹೊಮ್ಮಿದೆ.
ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ನೇಹಾ ಜೆ. ರಾವ್ 594 ಅಂಕಗಳೊಂದಿಗೆ ತೃತೀಯ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್ಯಾಂಕ್, ಸೃಜನ್ ಭಟ್. ಕೆ 591 ಅಂಕಗಳೊಂದಿಗೆ 6ನೇ ರ್ಯಾಂಕ್, ಪ್ರಜ್ಞಾ , ನಿತೇಶ್, ಪ್ರಣಮ್ಯ ಜಿ.ಎಚ್ 589 ಅಂಕಗಳೊಂದಿಗೆ 8ನೇ ರ್ಯಾಂಕ್, ಮಯೂರ್ ಶೆಟ್ಟಿ 588 ಅಂಕಗಳೊಂದಿಗೆ 9ನೇ ರ್ಯಾಂಕ್, ಉಜ್ವಲ ಶೇಟ್ 587 ಅಂಕಗಳೊಂದಿಗೆ 10ನೇ ರ್ಯಾಂಕ್ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ನೇಹಾ ಎಸ್. ರಾವ್ 593 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ , ಲಿಪಿಕಾ 592 ಅಂಕಗಳೊಂದಿಗೆೆ ರಾಜ್ಯ ಮಟ್ಟದಲ್ಲಿ 6 ನೇ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ತೃತೀಯ ರ್ಯಾಂಕ್ , ಎಸ್ . ವೈಷ್ಣವಿ ಕಾಮತ್, ಸಮೃದ್ಧಿ ಪೈ. ಎನ್, 588 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ 10ನೇ ರ್ಯಾಂಕ್ ಗಳಿಸಿರುತ್ತಾರೆ.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ 141 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 96 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಬಾರಿಯ ವಿಜ್ಞಾನ ವಿಭಾಗದಲ್ಲಿ 238 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 135 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 102 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಭೌತಶಾಸ್ತ್ರ 03, ರಸಾಯನಶಾಸ್ತ್ರ 05, ಗಣಿತಶಾಸ್ತ್ರ 09, ಜೀವಶಾಸ್ತ್ರ 03, ಗಣಕ ವಿಜ್ಞಾನ 20, ಬೇಸಿಕ್ ಮ್ಯಾಥ್ಸ್ 03, ಲೆಕ್ಕಶಾಸ್ತ್ರ 11, ವ್ಯವಹಾರ ಅಧ್ಯಯನ 05, ಸಂಖ್ಯಾಶಾಸ್ತ್ರ 04, ಕನ್ನಡ 03, ಸಂಸ್ಕೃತ 12 ವಿಷಯವಾರು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ.
ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.