ಉಡುಪಿ:ರಾಜ್ಯದಲ್ಲಿ 2022-23ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳು ಮುಕ್ತಾಯವಾಗಿವೆ. ಇಂದಿನಿಂದ ಅಂದರೆ ಏಪ್ರಿಲ್ 5, 2023 ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ
ರಾಜ್ಯಾದ್ಯಂತ 65 ಕಡೆ ಮೌಲ್ಯಮಾಪನ ನಡೆಯುತ್ತಿದ್ದು, ವಿಜ್ಞಾನ ವಿಷಯದ ಮೌಲ್ಯಮಾಪನ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ.ಉಡುಪಿ ಜಿಲ್ಲೆಯಲ್ಲಿ ಯಾವುದೇ ವಿಷಯದ ಮೌಲ್ಯಮಾಪನ ಕೇಂದ್ರ ಇಲ್ಲ. ಮಂಗಳೂರಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ಕೆಲವು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಮೌಲ್ಯಮಾಪಕರು ಮಂಗಳೂರಿಗೆ ಹೋಗಿ ಮೌಲ್ಯಮಾಪನ ಮಾಡುತ್ತಿದ್ದಾರೆ. ಇನ್ನು ವಿಜ್ಞಾನ ವಿಭಾಗದ ಮೌಲ್ಯಮಾಪಕರು ಈಗಾಗಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾಜಾದ್ಯಂತ 25 ಸಾವಿರ ಮೌಲ್ಯ ಮಾಪಕರು ಮೌಲ್ಯಮಾಪನ ಕಾರ್ಯ ಶುರು ಮಾಡಿದ್ದಾರೆ. 37 ವಿಷಯದ ಒಟ್ಟು 45 ಲಕ್ಷ ಉತ್ತರ ಪತ್ರಿಕೆಯ ಮೌಲ್ಯಮಾಪನ ಆಗಬೇಕಿದೆ.